ಯುವಕರಿಗೆ ಹೊಸ ಉದ್ಯೋಗ ಕಲ್ಪಿಸಲು ಸರ್ಕಾರ ಬದ್ಧ
ಲೋಕದರ್ಶನ ವರದಿ
ಶಿಗ್ಗಾವಿ 01: ನಿರುದ್ಯೋಗ ಮಹಿಳೆಯರಿಗೆ ಮತ್ತು ಯುವಕರಿಗೆ ಹೊಸ ಉದ್ಯೋಗ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಸದ್ಯದಲ್ಲಿ ಶಿಗ್ಗಾವಿ ಜವಳಿ ಪಾರ್ಕ ಶೀಘ್ರದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಜವಳಿ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರಪಾಟೀಲ ಮನೇನಕೊಪ್ಪ ಹೇಳಿದರು.
ಪಟ್ಟಣದ ಪ್ರಭಂಜನ್ ಇಂಡಸ್ಟ್ರೀಸ್ಗೆ ಭಾನುವಾರ ಸಂಜೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾತನಾಡಿದಅವರು, ರೈತಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಜವಳಿ ಪಾರ್ಕನಲ್ಲಿ ಉದ್ಯೋಗ ನೀಡಲಾಗುತ್ತದೆ. ಅದರಿಂದ ಅವರ ಸುರಕ್ಷತೆ ಮಾಡಿದಂತಾಗುತ್ತಿದೆ. ಮಹಿಳೆಯರು ಇಂದು ಮನೆ ಬಿಟ್ಟು ಕೆಲಸಕ್ಕೆ ಬರಬೇಕಾಗಿದೆ ಎಂದರು.
ಕೈಮಗ್ಗು, ಮಹಿಳಾ ಗಾರ್ಮೆಂಟ್ಸ್ಗಳು, ಜಿನ್ನಿಂಗ್ ಸೇರಿದಂತೆ ಶಿವಮೊಗ್ಗದಲ್ಲಿ ಸಾಯಿ, ಹಿಮತ್ವಾಲಾ ಎಕ್ಸ್ಪೊರ್ಟಗಳು ಬಂದಿವೆ. ಈ ಮೊದಲು ಕಮೀಷ್ನ್ರುಗಳು ಮತ್ತು ವಿವಿಧ ಇಲಾಖೆ ಮಂತ್ರಿಗಳು ವಿಧಾನಸಭೆಗೆ ಸೀಮಿತರಾಗಿದ್ದರು. ಈಗ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಇತ್ಯರ್ಥ ಮಾಡುತ್ತಿದ್ದಾರೆ.ಉದ್ಯಮಿದಾರರಿಗೆ ಪ್ರೋತ್ಸಾಹ, ಉದ್ಯೋಗ ಸೃಷ್ಟಿಸುವ ಕಾರ್ಯ ನಡೆದಿದೆ. ಉದ್ಯಮಿಗಳ ನಷ್ಟ ತಡೆಯುವುದು ಮುಖ್ಯವಾಗಿದೆ ಎಂದರು.
ಜವಳಿ ಅಂತರಾಷ್ಟೀಯ ಮಟ್ಟದಾಗಿದೆ.ನಮ್ಮದೇಶ, ಜಿಲ್ಲೆ, ತಾಲ್ಲೂಕು ಮೂರು ಮುಖ್ಯವಾಗಿದೆ. ಮೇಕ್ಇನ್ಇಂಡಿಯಾ ಎನ್ನಲಾಗಿದೆ. ಇಲ್ಲಿ ಬೆಳೆದ ಉತ್ಪಾದನೆ ಇಲ್ಲಿನ ಜನರಿಗೆ ಬಳಕೆಯಾಗಬೇಕು ಎಂಬುವದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಹೀಗಾಗಿ ಶಿಗ್ಗಾವಿ ಕ್ಷೇತ್ರದಲ್ಲಿ ಸಕ್ಕರೆಕಾರ್ಖಾನೆ, ಜವಳಿ ಪಾರ್ಕ ,ಅಂಬುಜಾ ಕಂಪನಿ ಆರಂಭಿಸುವ ಮೂಲಕ ಅನೇಕ ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಉತ್ತೇಜನ ನೀಡುತ್ತಿದೆ. ಅಲ್ಲದೆ, ಈ ಕ್ಷೇತ್ರದ ಅಭಿವೃದ್ಧಿಗಾಗಿ 62ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಏಳು ಬೃಹತ್ ಜವಳಿ ಪಾರ್ಕ ಸ್ಥಾಪನೆಯಾಗಿದ್ದು, ಅದರಲ್ಲಿ ಒಂದನ್ನು ರಾಜ್ಯದಲ್ಲಿ ತೆರೆಯಲಾಗುತ್ತಿದೆ ಎಂದರು.
ಪ್ರಭಂಜನ್ ಇಂಡಸ್ಟ್ರೀಸ್ ಮುಖ್ಯಸ್ಥರಾಘವೇಂದ್ರ ಮೇಲಗೇರಿ, ಪ್ರಭಂಜನ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕಿ ರಾಧಿಕಾ ಮೆಲಗೇರಿ, ಮಧು ಮೆಲಗೇರಿ, ಹೊನ್ನಪ್ಪ ಹೂಗಾರ, ಎಂ.ಎನ್.ಹೊನಕೇರಿ, ಗುಡ್ಡಪ್ಪ ಮತ್ತೂರ, ಬಸವರಾಜ ನಾರಾಯಣಪುರ, ಚನ್ನಬಸಪ್ಪ ಶಿರಬಡಗಿ, ಮಲ್ಲೇಶಪ್ಪ ಸುಂಕದಮತ್ತಿತರರು ಉಪಸ್ಥಿತರಿದ್ದರು.