ಶಿಗ್ಗಾವ್

ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಗೊರವಯ್ಯ ರಾಮಪ್ಪಜ್ಜ ಭೇಟಿ

ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಗೊರವಯ್ಯ ರಾಮಪ್ಪಜ್ಜ ಭೇಟಿ

ಲೋಕದರ್ಶನ ವರದಿ 


ಶಿಗ್ಗಾವಿ 30: ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಮೈಲಾರದ ವಂಶ ಪಾರಂಪಾರಿಕದಿಂದ ಕಾರಣಿಕ ನುಡಿಯುತ್ತ ಬಂದಿರುವ ಗೊರವಯ್ಯ ರಾಮಪ್ಪಜ್ಜನವರು ಬೇಟಿ ನೀಡಿದ್ದರು. 

 ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರಿಗೆ ಆರ್ಶೀವದಿಸಿದ ಅವರು ಕಳೆದ ವರ್ಷ ಮೈಲಾರ ಜಾತ್ರೆಯಲ್ಲಿ ಕಾರಣಿಕ ನುಡಿದರು “ಮುತ್ತಿನ ರಾಶಿ ಮೂರು ಭಾಗ ಆಧಿತಲೇ ಪರಾಕ್‌” ಎಂದು ರಾಮಪ್ಪ ಗೊರವಯ್ಯ ನಾಡಿನ ಭವಿಶ್ಯ ನುಡಿದಿದ್ದರು, ಕಳೆದ ಏಳು ವರ್ಷಗಳಿಂದ ಕಾರಣಿಕ ನುಡಿಯುತ್ತಿರುವ ಇವರು ಮುತ್ತಿನ ರಾಶಿ ಮೂರು ಭಾಗದಲ್ಲಿ ಸಮೃದ್ದ ಮಳೆ, ಬೆಳೆ ಆಗಲಿದ್ದು. ಉಳಿದ ಒಂದು ಭಾಗದಲ್ಲಿ ಮಳೆ ಬೆಳೆಯು ಸಮಸ್ಯೆ ಆಗಲಿದೆ ಎಂಬುವ ಕಾರಣಿಕ ನುಡಿದ್ದನ್ನ ಇಲ್ಲಿ ಸ್ಮರಿಸಬಹುದು. 

ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಮೈಲಾಲಿಂಗೇಶ್ವರ ದೇವಸ್ಥಾನದ ಸಮಿತಿ ಸದಸ್ಯ ಸಂಗಣ್ಣ ಕಂಕನವಾಡ, ಭಕ್ತರುಗಳಾದ ಮಾಲತೇಶ ಯಲವಗಿ, ಸುರೇಶ ಯಲಿಗಾರ, ರಮೇಶ ಸಾವಕ್ಕವನವರ, ಸಂಜೀವ ಬಾರಿಗಿಡದ, ಮಂಜುನಾಥ ಮಾವೂರ, ವೀರಪಾಕ್ಷಪ್ಪ ಮಾವೂರ, ಸುನೀಲ ಸುಣಗಾರ, ನಿಂಗಪ್ಪ ಮಾವೂರ, ನಿಂಗಪ್ಪ ಚಂದಾಪುರ, ಮುತ್ತಪ್ಪ ಹೂಸಮನಿ, ಗದಿಗೇಪ್ಪ ಕೊಡ್ಲವಾಡ, ಪ್ರಕಾಶ ಗಿರ್ಜಿ ಹಲವಾರು ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ