ಸದ್ಭಾವನೆ ನಮ್ಮೆಲ್ಲರ ಬದುಕಿನಲ್ಲಿ ನಿತ್ಯ ಅಳವಡಿಕೆಯಾಗಬೇಕು: ಮಾಚೇನಹಳ್ಳಿ
ರಾಣಿಬೆನ್ನೂರು 14: ಭಾರತೀಯರು ಭಾವೈಕ್ಯತೆಯ ಹರಿಕಾರರು, ಭಾವೈಕ್ಯತೆಗೆ ಮತ್ತೊಂದು ಹೆಸರೇ ಭಾರತ ಇಂತಹ ಪುಣ್ಯ ಭಾರತದಲ್ಲಿ ಜನ್ಮ ತಾಳುವುದೇ ಮಹಾ ಭಾಗ್ಯವಾಗಿದೆ ಎಂದು ಆರ್ ಟಿ ಇ ಎಸ್ ಕಾಲೇಜು ಉಪನ್ಯಾಸಕ ಎಫ್.ಎಚ್. ಮಾಚೇನಹಳ್ಳಿ ಹೇಳಿದರು. ಅವರು ನಗರ ಹೊರವಲಯದ ಆರ್ ಟಿ ಇ ಎಸ್. ಕಾಲೇಜು ಸಾಹುಕಾರ ಸಭಾಭವನದಲ್ಲಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಐಕ್ಯೂಎಸಿ ರಾ. ತಾ.ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ, ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯರು, ಸದಾ ಶಾಂತಿ ಪ್ರಿಯರಾಗಿದ್ದಾರೆ, ಇಲ್ಲಿ ಯಾವುದೇ ಜಾತಿ ಮತ ಬೇಧ ಭಾವ ಇಲ್ಲ ಹೀಗಾಗಿ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಕೂಡಿ ಬಾ ಳುತ್ತಿದ್ದೇವೆ. ಇದರಿಂದಾಗಿ ನಾವುಗಳು ಸದಾ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಇತಿಹಾಸ ಸ್ಮರಿಸಿ ಮಾತನಾಡಿದರು.
ಕಾಲೇಜು ಪ್ರಾಚಾರ್ಯ, ಸಿ. ಎ. ಹರಿಹರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಮಧುಕುಮಾರ್ ಆರ್. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ, ಡಾ: ಸರಸ್ವತಿ ಬಮ್ಮನಾಳ, ಉಪನ್ಯಾಸಕರಾದ ಸುರೇಶ ಆಜರೆಡ್ಡಿ, ಮುನಾವರ್ ಅಲಿಖಾನ್, ಡಾ ಡಿ.ವ್ಹಿ. ಜಂಗಣ್ಣನವರ್, ಡಾ ಪಿ.ಬಿ. ಕೊಪ್ಪದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರೊ :ಶಿವಕುಮಾರ್ ಬೆಣ್ಣೆ, ಅವರು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ . ರೇವತಿ ಸಂಗಡಿಗರು ಪ್ರಾರ್ಥಿಸಿದರು. ಶರತ್ ಗೌಡ ಎಡಚಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.