ಗೋಕಾಕ್

ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಉತ್ತಮ ಫಲಿತಾಂಶ

ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಉತ್ತಮ ಫಲಿತಾಂಶ







ಮಮದಾಪೂರ 11: ಸ್ಥಳೀಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಪರಿಣಾಮ 50ಅ ರಷ್ಟಾಗಿದ್ದು ಗ್ರಾ.ವಿ.ವ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಗುರು ಬಳಗ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.     

ಪ್ರಥಮ 5 ಸ್ಥಾನ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು ಕ್ರಮವಾಗಿ ಈ ಕೆಳಗಿನಂತಿವೆ ಸಿಂಧು ಚಳಕೊಪ್ಪ (535), ಅನಿಲ ಸುಣಧೋಳಿ(526), ಭಾರತಿ ಹೊಸಮನಿ (514), ಭಾಗ್ಯಶ್ರೀ ಸುಣಧೋಳಿ ಮತ್ತು ಪ್ರೀತಿ ಬ್ಯಾಹಟ್ಟಿ (505), ಮಹೇಶ ಮಾಯನ್ನವರ (501) ಇವರುಗಳನ್ನುಮಮದಾಪೂರದ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು. ಕಾರ್ಯದರ್ಶಿ ಹಾಗೂ ಸದಸ್ಯರು. ಗ್ರಾಮದ ಹಿರಿಯರು. ವಿದ್ಯಾರ್ಥಿ ಪಾಲಕರು, ಹಳೆಯ ವಿದ್ಯಾರ್ಥಿ ಬಳಗ, ಸ್ದಳೀಯ ಶಿಕ್ಷಣ ಸಂಸ್ಥೆಗಳು ತುಂಬಾ ಹರ್ಷ ವ್ಯಕ್ತ ಪಡಿಸಿದ್ದಾರೆ. 


ಸುದ್ದಿ ಓದಿ