ಗೋಕಾಕ್

ಜ್ಞಾನದೀಪ ಕಾಲೇಜಿಗೆ ಉತ್ತಮ ಫಲಿತಾಂಶ

ಜ್ಞಾನದೀಪ ಕಾಲೇಜಿಗೆ ಉತ್ತಮ ಫಲಿತಾಂಶ

ಲೋಕದರ್ಶನ ವರದಿ

ಗೋಕಾಕ 27: ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನದೀಪ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದೊರಕಿದೆ. ವಿಜ್ಞಾನ ವಿಭಾಗದಲ್ಲಿ ಸುಶ್ಮಿತಾ ಹುಕ್ಕೇರಿಮಠ (95.5%) ಪ್ರಥಮ, ಸಾಗರ ತಡಸಲೂರ (93%) ದ್ವಿತೀಯ, ವಿಕಾಸ ಸರ್ವಿ  (92.8%) ತೃತೀಯ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ಶಿಲ್ಪಾ ಮುತಾರಿ (94.33%) ಪ್ರಥಮ, ಶ್ರೇಯಾ ಗುಲ್ಲ (91.93%) ದ್ವಿತೀಯ, ಮೇಘಾವತಿ ಮಗದುಮ್ (89%) ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ನರು, ಸದಸ್ಯರು, ಕಾರ್ಯದರ್ಶಿ ಗಳು, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ 

ಸುದ್ದಿ ಓದಿ