ಸಿರಿಧಾನ್ಯ ಬಳಕೆಯಿಂದ ಸದೃಢ ಆರೋಗ್ಯ: ಹೆಚ್.ಜಿ.ಪಾಟೀಲ
ಹೂವಿನಹಡಗಲಿ 11: ಆಧುನಿಕ ಆಹಾರ ಪದ್ದತಿಯಿಂದ ಮಕ್ಕಳಿಗೆ ಪೋಷಕಾಂಶದ ಕೊರತೆಯಿಂದ ಅಪೌಷ್ಟಿಕತೆ ಹೆಚ್ಚಾಗಿ ನಾನಾ ರೋಗ ರುಜಿನಗಳಿಂದ ಬಳಲುತ್ತಿದ್ದು, ನಾವು ನಿತ್ಯ ಸೇವಿಸುವ ಆಹಾರದಲ್ಲಿ ಸಿರಿಧಾನ್ಯ ಬಳಕೆಯಿಂದ ಸದೃಢ ಆರೋಗ್ಯ ಹೊಂದಬಹುದು ಎಂದು ಕಸಾಪ ಮಾಜಿ ಅಧ್ಯಕ್ಷ ಹೆಚ್.ಜಿ.ಪಾಟೀಲ ಹೇಳಿದರು.
ತಾಲೂಕಿನ ಸೋಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಶಾಲೆಗೊಂದು ಕನ್ನಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಿರಿಧಾನ್ಯ ಕುರಿತು ಉಪನ್ಯಾಸ ನೀಡಿದರು.
ರಾಷ್ಟ್ರ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಕಲ್ಲಪ್ಪ ಕಾಟ್ರಹಳ್ಳಿ ಕೃಷಿಯಲ್ಲಿ ಹೆಚ್ಚು ಸಾವಯವ ಪದ್ದತಿಯನ್ನು ಅಳವಡಿಸಿಕೊಂಡು ರಸಾಯನ ವಸ್ತುಗಳಿಗೆ ಕಡಿವಾಣ ಹಾಕಬೇಕಿದೆ ಎಂದರು. ಕಸಾಪ ಸಂಘಟನಾ ಕಾರ್ಯದರ್ಶಿ ಬಸವರಾಜ ಹಡಗಲಿ, ಕರ್ನಾಟಕ ಏಕೀಕರಣ ಕನ್ನಡ ಸಾಹಿತ್ಯ ಹಾಗೂ ಕವಿಗಳ ಕುರಿತು ಅಧ್ಯಯನದ ಅಗತ್ಯವಿದೆ ಎಂದರು. ಶಿಕ್ಷಕಿಯರಾದ ರತ್ನಮ್ಮ, ವನಜಾಕ್ಷಿ ಇದ್ದರು. ಪಿ.ಗಂಗೇಶ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕಂಠಿ ಬಸವರಾಜ,ಎರಿ್ರಸ್ವಾಮಿ, ಸಿ.ವಿಶ್ವನಾಥ ನಿರೂಪಿಸಿದರು.