ಯರಗಟ್ಟಿ

ಮಾಯವ್ವ ಸನ್ನಿಂಗನವರಗೆ ಬಂಗಾರದ ಪದಕ

ಮಾಯವ್ವ ಸನ್ನಿಂಗನವರಗೆ ಬಂಗಾರದ ಪದಕ

ಪ್ಯಾರಾ ಟೇಬಲ್ ಟೆನಿಸ್ ನ್ಯಾಷನಲ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ  

ಯರಗಟ್ಟಿ 07: ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್ ಹಾಗೂ ಸೋರ್ಟ್‌ ಕ್ವಾಲಿಟಿ ಆಫ್ ಇಂಡಿಯಾ ಸಹಯೋಗದಲ್ಲಿ ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.  ಪ್ಯಾರಾ ಟೇಬಲ್ ಟೆನಿಸ್ ನ್ಯಾಷನಲ್ ಚಾಂಪಿಯನ್‌ಶಿಪ್ ಎಂಎಸ್ 7 ಸ್ಪರ್ಧೆಯಲ್ಲಿ ಮಾಯವ್ವ ಸನ್ನಿಂಗನವರ ಚಾಂಪಿಯನ್ ಆಗಿ ಹೊರಹೊಮ್ಮಿದರು. ಮಿಕ್ಸೆಡ್ ಡಬಲ್ಸ್‌ನಲ್ಲೂ ವಿಜಯ್‌: ಕ್ರೀಡಾಕೂಟದ ಮಿಕ್ಸೆಡ್ ಡಬಲ್ಸ್‌ನ ಅಂತಿಮ ಪಂದ್ಯದಲ್ಲಿ ಸಮೀಪದ ತಾವಲಗೇರಿ ಗ್ರಾಮದ ಮಾಯವ್ವ ಮಹಾದೇವಪ್ಪ ಸನ್ನಿಂಗನವರ  ಅವರ ಜೋಡಿ ಗುಜರಾತ್‌ನ ಯಜಡಿ  ಬಾಮಗಾರ್ ಮತ್ತು ನೂರ್‌ಜಾನ್ ಅವರನ್ನು ಸೋಲಿಸಿ 3-2 ಅಂತರದಲ್ಲಿ ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. 


ಸುದ್ದಿ ಓದಿ