ಪಶುವೈಧ್ಯಾಧಿಕಾರಿಗೆ ಚಿನ್ನದ ಪದಕ
ತಾಳಿಕೋಟೆ05: ಪಟ್ಟಣದ ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶುವೈಧ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಬಸವರಾಜ ಹಿರೇಮಠ ಅವರಿಗೆ ಬಿದರದ ಪಶು ವೈಧ್ಯಕೀಯ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಲಭಿಸಿದೆ.
ಡಾ.ಬಸವರಾಜ ಹಿರೇಮಠ ಅವರು ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆ ವಿಷಯದಲ್ಲಿ ಸ್ನಾತ್ತಕೋತ್ತರ ಪಶುವೈಧ್ಯಕೀಯ ವಿಜ್ಞಾನ ಪದವಿಯಲ್ಲಿ ವಿಸ್ವವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಎಮ್ವಿಎಸ್ಇ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಿನ್ನಲೆಯಲ್ಲಿ ಇತ್ತೀಚಿಗೆ ಬೀದರನಲ್ಲಿ ನಡೆದ ಕರ್ನಾಟಕ ಪಶು ವೈಧ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್, ರಾಜ್ಯ ಪಶು ವೈಧ್ಯಕೀಯ ಇಲಾಖೆಯ ಸಚಿವ ಪ್ರಭು ಚೌವ್ಹಾಣ ಚಿನ್ನದ ಪದಕ ಪ್ರದಾನ ಮಾಡಿದರು. ಡಾ.ಬಸವರಾಜ ಹಿರೇಮಠ ಸಾಧನೆಗೆ ಪಶು ವೈಧ್ಯಕೀಯ ಇಲಾಖೆ ಹಿರಿಯ ಅಧಿಕಾರಿಗಳು, ಸ್ನೇಹಿತರು, ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.