ರಾಣೆಬೆನ್ನೂರ

ಬನಶಂಕರಿ ದೇವಿಗೆ ಸುಹಾಸಿನಿಯರಿಂದ ಸಹಸ್ರನಾಮಾವಳಿ

ಬನಶಂಕರಿ ದೇವಿಗೆ ಸುಹಾಸಿನಿಯರಿಂದ ಸಹಸ್ರನಾಮಾವಳಿ

ರಾಣೀಬೆನ್ನೂರ27: ನಗರದ  ಬನಶಂಕರಿ ದೇವಿಯ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಶ್ರೀದೇವಿಗೆ ಸಾಮೂಹಿಕವಾಗಿ ಸುಹಾಸಿನಿಯರು ಕುಂಕುಮಾರ್ಚನೆ ಮತ್ತು ಪಂಚಾಮೃತ ಅಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕರಾದ ಧನು ಜೋಷಿ, ಶ್ರೀನಿವಾಸ ಜೋಷಿ ಅವರು ನೆರವೇರಿಸಿದರು. ದೇವಿಯ ಸಹಸ್ರ ನಾಮಾವಳಿ, ಅರ್ಚನ ಕಾರ್ಯಕ್ರಮ ನೆರವೇರಿಸಲಾಯಿತು. ಭಕ್ತ ಸಮೂಹವು ಸೇರಿದಂತೆ ಸಾರ್ವಜನಿಕವಾಗಿ ಮಹಾ ಅನ್ನಪ್ರಸಾದ ವಿತರಿಸಲಾಯಿತು. ದೇವಸ್ಥಾನದ ಮುಖ್ಯಸ್ಥ ಡಾ.ಸಂಜಯ್ ನಾಯಕ್ ಡಾ. ಎಂ.ಎಂ.ಅನಂತರಡ್ಡಿ, ಡಾ. ಬಸವರಾಜ ಕೇಲಗಾರ, ನಗರಸಭಾ ಸದಸ್ಯ ಬಸವರಾಜ ಹುಚ್ಚಗೊಂಡರ್ ಗಣ್ಯ ವಿ.ಆರ್.ಮಕರಿ, ವೀಣಾ ಮಕರಿ, ಸೀಮಾ ಜೋಷಿ, ಆಶಾ ನಾಡಿಗೇರ, ಸಹನಾ ನಾಯಕ್, ವಸಂತ ನಾಯಕ್, ಉಮೇಶ ವಿಶ್ವರೂಪ, ಭದ್ರಿನಾಯಕ್ ಪಂಪಾ ನಾಯಕ್, ಮತ್ತಿತರ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು. 



ಸುದ್ದಿ ಓದಿ