ಗ್ಲೋಬಲ್ ಕಾಲೇಜು, ವಿಜ್ಞಾನ ವಿಭಾಗದಲ್ಲಿ ಶೇ.84 ರಷ್ಟು ಫಲಿತಾಂಶ
ಹೂವಿನ ಹಡಗಲಿ 11: ತಾಲೂಕಿನ ಹೊಳಗುಂದಿ ಗ್ರಾಮದ ಗ್ಲೋಬಲ್ ಪಿಯುಸಿ ಕಾಲೇಜು ಈಚೆಗೆ ಆರಂಭವಾಗಿದ್ದು (ಅಅ-0406) 2024-25ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.84.16 ರಷ್ಟು ಫಲಿತಾಂಶ ಬಂದಿದೆ. ತಾಲ್ಲೂಕಿಗೆ ಅತಿಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಾಲೂಕಿನ ಹಳೆಯ ಕಾಲೇಜುಗಳಿಗೆ ಹೋಲಿಸಿದರೆ ವಿಜ್ಞಾನ ವಿಭಾಗದಲ್ಲಿ ಗ್ಲೋಬಲ್ ಕಾಲೇಜು ಪ್ರಗತಿ ಸಾಧಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 84.16ಅರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ವಿನೂತನ ದಾಖಲೆ ಬರೆದಿದ್ದಾರೆ. ಆಸ್ಮಾ ವಿದ್ಯಾರ್ಥಿನಿ 600ಕ್ಕೆ 535 ಅಂಕಗಳನ್ನು ಗಳಿಸಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 82.35ಅರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೊಹಮ್ಮದ್ ಸಲೆಹ ಎಂಬ ವಿದ್ಯಾರ್ಥಿ 600 ಕ್ಕೇ 502 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.ಅಭಿನಂದನೆ: ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಕರೀಮ್ ರಫಿ. ಪ್ರಾಂಶುಪಾಲರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಶುಭ ಕೋರಿ ಅಭಿನಂದಿಸಿದ್ದಾರೆ.