ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ಮಹತ್ವ ನೀಡಿ
ತಾಳಿಕೋಟೆ 11: ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೆ ಆದಂತಹ ಪ್ರಾಮುಖ್ಯತೆ ಇದೆ, ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಮಾಡಿ ಶ್ರೇಷ್ಟವ್ಯಕ್ತಿಯಾಗುತ್ತಾರೆ ಎಂದು ಇಲಕಲ್ಲ ಎಸ್.ಆರ್.ಕಂಠಿ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ವಿಶ್ವನಾಥ ವಂಶಾಕೃತಮಠ ಹೇಳಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ, ಎಸ್.ಕೆ.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ 2020-21ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ಎನ್.ಸಿ.ಸಿ, ವಾಯ್.ಆರ್.ಸಿ. ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನ ಕಂಡುಕೊಂಡಿದ್ದಾನೆ ಎಂದರೆ ಅದರ ಅರ್ಥ ಆ ವ್ಯಕ್ತಿ ಶಿಸ್ತು ಬದ್ದ ಜೀವನದ ಜೋತೆಯಲ್ಲಿ ಸಮಯದ ಮಹತ್ವ ,ಸಮಯದ ಸದ್ಭಳಕೆ, ಹಾಗೂ ಸಮಯವನ್ನ ಉಪಯೋಗಿಸಿಕೊಳ್ಳುವ ಚಾಣಾಕ್ಷತೆಯನ್ನ ಹೊಂದಿರುತ್ತಾನೆ. ಸಮಯವನ್ನು ಯಾರು ಭೇಜವಭ್ದಾರಿಯಿಂದ ಕಾಲಹರಣ ಮಾಡಿ ಅಶಿಸ್ತಿನಿಂದ ಇರುತ್ತಾರೋ ಅವರು ಜೀವನದೂದ್ದಕ್ಕು ಗೊಗರಿಯುತ್ತಾನೇ ಇರುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಕನಸುಗಳನ್ನು ಬಿತ್ತಿ ಅವರಲ್ಲಿ ಸ್ಫೂರ್ತಿ ತುಂಬಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಹಾಗೂ ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದರು.
ವೀ.ವಿ.ಸಂಘದ ಚೇರಮನ್ ಎಸ್.ಎ.ಸರೂರÁ್ಮತನಾಡಿ, ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ, ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಇದರಿಂದ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಪಿ.ಹೆಚ್.ಡಿ. ಪದವಿ ಪಡೆದ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಡಿ.ಬಿ. ಮೂಗಡ್ಲಿಮಠ ಅವರನ್ನು ಸನ್ಮಾನಿಸಲಾಯಿತು . ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಆರ್.ವ್ಹಿ.ಜಾಲವಾದಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿಯ ಚೇರ್ಮನ್ ವ್ಹಿ.ಸಿ.ಹಿರೇಮಠ, ವೀವಿ ಸಂಘದ ಕಾರ್ಯದರ್ಶಿ ಬಿ.ಎಸ್.ಗಬಸಾವಳಗಿ, ವೀ.ವಿ.ಸಂಘದ ಸದಸ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಅನೀಲಕುಮಾರ ಆಲಾಳಮಠ ಸ್ವಾಗತಿಸಿ ಪರಿಚಯಿಸಿದರು. ಪ್ರೊ. ರಮೇಶ ಜಾಧವ ವರದಿ ವಾಚನ ಮಾಡಿದರು. ಪ್ರೊ. ಸ್ನೇಹಾ ನಾವದಗಿ ಹಾಗೂ ಪ್ರೊ. ಸುವರ್ಣಾ ಪಾಟೀಲ ನಿರೂಪಿಸಿದರು. ರಾಜೇಶ್ವರಿ ಕುಲಕರ್ಣಿ ವಂದಿಸಿದರು.