ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ: ಬಿರಾದರ
ಬಳ್ಳಾರಿ 11: ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಆಪ್ತಸಮಾಲೋಚನೆಯ ಜೊತೆಗೆ ಉತ್ತಮ ಮಾರ್ಗದರ್ಶನ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಬಿ.ಸಿ.ಬಿರಾದರ ಅವರು ಸೂಚನೆ ನೀಡಿದರು. ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದೇವಿನಗರದ ಸಕರ್ಾರಿ ವೀಕ್ಷಣಾಲಯದ ಸಂಸ್ಥೆಯ ಆವರಣದಲ್ಲಿ ಬಾಲನ್ಯಾಯ ಮಂಡಳಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು. ಭಾರತದ ಸಂವಿದಾನ ಅನುಚ್ಛೇದಗಳಲ್ಲಿ ಮಕ್ಕಳಿಗಾಗಿರುವ ಕಲಂಗಳ ಬಗ್ಗೆ, ಅವಕಾಶಗಳ ಬಗ್ಗೆ ವಿವರಿಸಿದರು. ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಆಪ್ತಸಮಾಲೋಚನೆಯ ಜೊತೆಗೆ ಉತ್ತಮ ಮಾರ್ಗದರ್ಶನ ನೀಡಲು ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು. ಜೀವನದಲ್ಲಿ ಏನ್ನನ್ನಾದರೂ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು, ಸಾಧಿಸಿ ತೋರಿಸುವಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಕಿವಿಮಾತುಗಳನ್ನು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಬಾಲನ್ಯಾಯ ಮಂಡಳಿಯ ಅಧ್ಯಕ್ಷೆ ಕಾತ್ಯಾಯಿನಿ ಅವರು ಮಾತನಾಡಿ, ಬಾಲನ್ಯಾಯ ಮಂಡಳಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಸಂಪರ್ೂಣವಾಗಿ ಯಾವುದೇ ಅನಾವಶ್ಯಕ ದುಂದುವೆಚ್ಚಗಳಿಲ್ಲದೇ ನೂತನ ಕಟ್ಟಡ ಶೀಘ್ರವಗಿ ಗುಣಮಟ್ಟದಲ್ಲಿ ರಾಜೀಯಾಗದ ರೀತಿಯಲ್ಲಿ ನಿಮರ್ಾಣವಾಗಬೇಕೆಂದರು. ಬಾಲನ್ಯಾಯ ಮಂಡಳಿಯ ಮುಂದೆ ಹಾಜರಾಗುವ ಮಕ್ಕಳು ಇತರೆ ಮಕ್ಕಳಿಗಿಂತ ತುಂಬಾ ವಿಭಿನ್ನವಾಗಿರುತ್ತಾರೆ. ಅವರಿಗೆ ಆಪ್ತಸಮಾಲೋಚನಾ ಸೇವೆ, ಪುರ್ನವಸತಿ ಸೇವೆ ಒದಗಿಸುವುದಷ್ಟೆ ಅಲ್ಲ, ಆ ಮಕ್ಕಳು ಇಲ್ಲಿಂದ ಹೊರಗಡೆ ಹೋದ ಮೇಲೆ ಮುಖ್ಯವಾಹಿನಿಗೆ ಬರಬೇಕು. ಅದ್ದರಿಂದ ಈ ಕುರಿತು ಮಕ್ಕಳಿಗೆ ಸಾಕಷ್ಟು ತರಬೇತಿಗಳ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ ಅವರು ಬಾಲನ್ಯಾಯ ಮಂಡಳಿಯ ಕಾರ್ಯವೈಖರಿ ಬಗ್ಗೆ, ಮಕ್ಕಳಿಗೆ ಒದಗಿಸಲಾಗುತ್ತಿರುವ ಪುರ್ನವಸತಿ ಬಗ್ಗೆ, ಬಾಲನ್ಯಾಯ ಮಂಡಳಿಯ ಮುಂದೆ ಎದುರಾಗುತ್ತೀರುವ ಸವಾಲುಗಳ ಬಗ್ಗೆ ವಿವರಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಂಕಲಯ್ಯ ಹಿರೇಮಠ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ನಾಗೇಶ ಬಿಲ್ವಾ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಸಕರ್ಾರಿ ಬುದ್ದಿಮಾಂದ್ಯ ಬಾಲಕರ ಬಾಲಮಂದಿರದ ಅಧೀಕ್ಷಕ ಕೊಟ್ರಪ್ಪ.ಕೆ ಅವರು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು, ಹಿರಿಯ ನ್ಯಾಯಾಧೀಶರು, ವಕೀಲರು, ಬಾಲನ್ಯಾಯ ಮಂಡಳಿಯ ಸದಸ್ಯರಾದ ಪುಷ್ಪಾಲತಾ ಹಾಗೂ ಡಿ.ಟಿ.ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗಳು, ಪೋಲಿಸ್ ಅಧಿಕಾರಿಗಳು, ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವೀಕ್ಷಣಾಲಯದ ಮಕ್ಕಳು ಇತರೆ ಗಣ್ಯವಕ್ತಿಗಳು ಇದ್ದರು.