ಗೋಕಾಕ್

ಇದ್ದೂ ಇಲ್ಲದಂತಾದ ಘಟಪ್ರಭಾ ಪುರಸಭೆ

ಇದ್ದೂ ಇಲ್ಲದಂತಾದ ಘಟಪ್ರಭಾ ಪುರಸಭೆ

ಲೋಕದರ್ಶನ ವರದಿ

ಸುಧಾರಣೆಯಾಗದ ಆಡಳಿತ ಯಂತ್ರ: ಕೆಲಸಕ್ಕಾಗಿ ಅಲೆದಾಡಿ ಬೇಸತ್ತ ಜನರಿಂದ ಅಧಿಕಾರಿ ವರ್ಗಕ್ಕೆ ಹಿಡಿಶಾಪ 

ಘಟಪ್ರಭಾ 31: ಪಟ್ಟಣದಲ್ಲಿ ಅಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಸಾರ್ವಜನಿಕರು ತಮ್ಮ ಮನೆ ಹಾಗೂ ಜಾಗೆಗಳ ಉತಾರಗಳಿಗಾಗಿ ಮತ್ತು ಮನೆ ಕಟ್ಟಡ ಪರವಾಣಿಗೆಗಾಗಿ ದಿನನಿತ್ಯ ಘಟಪ್ರಭಾ ಪುರಸಭೆ ಕಛೇರಿಗೆ ಅಲೆದಾಡಿ ಬೇಸತ್ತು ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಮಲ್ಲಾಪೂರ ಪಿ.ಜಿ ಗ್ರಾಮ ಪಂಚಾಯತಿಯು 2015ರಲ್ಲಿ ಪಟ್ಟಣ ಪಂಚಾಯತಿಯಾಗಿ  ಮೇಲ್ದಜರ್ೆಗೆರಿತ್ತು, ಸಕರ್ಾರದ ಸಾಕಷ್ಟು ಅನುದಾನ ಸಹ ಹರಿದು ಬರುತ್ತಿದೆ, ಅಲ್ಲದೇ ಪಟ್ಟಣದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳು ನಡೆದರೂ ಸಹ ಆಡಳಿತ ಯಂತ್ರ ಮಾತ್ರ ಇನ್ನೂವರೆಗೂ ಸುಧಾರಣೆಯಾಗಿಲ್ಲ. 

2022ರಲ್ಲಿ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಹಾಗೂ ಪಕ್ಕದ ಧುಪದಾಳ ಗ್ರಾಮ ಪಂಚಾಯತಿಯನ್ನು ಸೇರಿಸಿ ಘಟಪ್ರಭಾ ಪುರಸಭೆ ಮಾಡಲಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿಗಳು ಸಹ ನಿಯೋಜನೆಗೊಂಡು ಆಡಳಿತ ಯಂತ್ರ ಸುಧಾರಿಸಬಹುದು ಎಂದು ಸಾರ್ವಜನಿಕರು ಭಾವಿಸಿದ್ದರು. 

ಪುರಸಭೆಯಾಗಿ ಒಂದು ವರ್ಷ ಕಳೆದರೂ ಕಛೇರಿಯಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಛೇರಿಗೆ ಬರುತ್ತಿಲ್ಲ. ಪಟ್ಟಣ ಪಂಚಾಯತಿಗೆ 2015 ರಲ್ಲಿ ಚುನಾಯಿತರಾದ ಆಡಳಿತ ಮಂಡಳಿಯ ಅವಧಿಯು ಸಹ 2020 ರಲ್ಲಿ ಮುಕ್ತಾಯಗೊಂಡಿದ್ದು, ಹೀಗಾಗಿ ಪುರಸಭೆಯಲ್ಲಿ ಅಧಿಕಾರಿ, ಸಿಬ್ಬಂದಿಗಳ ಹೇಳಿದ್ದೆ ವಾಖ್ಯ ಮಾಡಿದ್ದೇ ಕಾರ್ಯ ಆಗಿದ್ದು ಲಗಾಮು ಇಲ್ಲದಂತಾಗಿದೆ. ಸಾರ್ವಜನಿಕರು ತಮ್ಮ ಮನೆ, ಜಾಗಾ ಉತಾರಗಳಿಗಾಗಿ ದಿನಂಪ್ರತಿ ಅಲೇದಾಡಬೇಕಾಗಿದೆ ಇನ್ನಿತರ ದಾಖಲೆ ಹಾಗೂ ಆಸ್ತಿಗಳ ಡೈರಿಗಾಗಿ ತಿಂಗಳು ಗಂಟಲೇ ಕಾಯಬೇಕಾಗಿದ್ದು, ಕಂದಾಯ ಶಾಖೆಯ ಸಿಬ್ಬಂದಿಗಳು ಕಛೇರಿಯ ಬೇರೆ ಕೆಲಸ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆಂದು ಸಾರ್ವಜನಿಕರ ಆರೋಪವಾಗಿದೆ. 

ಘಟಪ್ರಭಾ ಪುರಸಭೆಯ ಕೂದಲೆಳೆ ಅಂತರದಲ್ಲಿ ಘಟಪ್ರಭಾ ನದಿ ಹರಿಯುತ್ತಿದ್ದರೂ ವಾರ ಕಳೆದರೂ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ, ಸಾರ್ವಜನಿಕರು ಕೇಳಿದರೆ ಸಿಬ್ಬಂದಿ ಇಲ್ಲಾ, ಮೋಟರ್ ಕೆಟ್ಟಿದೆ ಕರೆಂಟಿಲ್ಲ ಎಂದು ಅನೇಕ ಕುಂಟು ನೆಪ ಹೇಳಿ ಕಾಲ ಕಳೆಯುತ್ತಿದ್ದಾರೆ. ಕೆಲವರು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವಿದೆ. 

  ಪಟ್ಟಣದಲ್ಲಿಯ ಚರಂಡಿಗಳು ತುಂಬಿ ಗಬ್ಬು ನಾರುತ್ತಿದ್ದು ಚರಂಡಿಗಳನ್ನು ಸಿಬ್ಬಂದಿಗಳು  ಸ್ವಚ್ಛಗೊಳಿಸಿದ್ದರೂ ಕೂಡ ಅದರ ತ್ಯಾಜ್ಯವನ್ನು ನಿಗದಿತ ವೇಳೆಯಲ್ಲಿ ವಿಲೇವಾರಿ ಮಾಡದ ಕಾರಣ ತ್ಯಾಜ್ಯವು ಗಬ್ಬೆದ್ದು ನಾರುತ್ತಿದೆ ಈ ಬಗ್ಗೆ ಅಧಿಕಾರಿಗಳು ಯಾವುದೆ ಕ್ರಮಕೈಗೊಳ್ಳುತ್ತಿಲ್ಲ.

ಮನೆಯ ಕರ (ಫಾಳೆ) ಹಾಗೂ ನೀರಿನ ಕರ ಹೆಚ್ಚಳವಾಗಿದ್ದು, ಆಥರ್ಿಕ ಹೊರೆ ಹೆಚ್ಚಾಗಿ ಜನರು ಪರದಾಡುವಂತಾಗಿದೆ. ಗೋಕಾಕ ನಗರಕ್ಕಿಂತ ಘಟಪ್ರಭಾ ಪುರಸಭೆಯ ಆಸ್ತಿ ಕರ ಮತ್ತು ಕಟ್ಟಡ ಪರವಾಣಿಗೆ ವೆಚ್ಚ ಹೆಚ್ಚಾಗಿದ್ದು, ಅನೇಕ ವಿವಿಧ ಕರ ಮತ್ತು ನಿಧಿಗಳ ಹೆಸರಿನಲ್ಲಿ ಸಾವಿರಾರು ರೂಪಾಯಿ ಕರ ತುಂಬಿದರೂ ಸಹ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳು ಕಛೇರಿಗೆ ಬಂದ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವತರ್ಿಸುತ್ತಿಲ್ಲ ಅಲ್ಲದೇ ಸರಿಯಾಗಿ ಮಾಹಿತಿ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 ಒಟ್ಟಾರೆ ಸ್ವಚ್ಛತೆ ಜೊತೆಗೆ ಅಸಮರ್ಥಕ ನೀರು ಪೂರೈಕೆ, ಉತಾರ ಮನೆ ಪಾಳೆ, ಸೇರಿದಂತೆ ಅನೇಕ ಸಮಸ್ಯೆಗಳು ಜನರಿಗೆ ಕಾಡುತ್ತಿದ್ದು, ಪುರಸಭೆ ಆಡಳಿತ ಯಂತ್ರಕ್ಕೆ ಸೂಕ್ತ ಚಿಕಿತ್ಸೆ ನೀಡಿ ಚುರುಕ ಮುಟ್ಟಿಸುವುದು ಅಗತ್ಯವಾಗಿದ್ದು, ಪೌರಾಡಳಿತ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಿ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸರಿ ಪಡಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

**ಘಟಪ್ರಭಾ ಪುರಸಭೆ ರಚನೆಯಾಗಿ ಒಂದು ವರ್ಷ ಕಳೆದರೂ ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿಸುತ್ತಿಲ್ಲ. ಪಟ್ಟಣದ ಸ್ಚಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಆಸ್ತಿ ಮೇಲಿನ ಕರಗಳನ್ನು ಕಡಿಮೆ ಮಾಡಿ ಬಡ ಜನರಿಗೆ ಅನುಕೂಲ ಮಾಡುವ ಅಗತ್ಯವಿದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

-ಅಪ್ಪಾಸಾಬ ಮುಲ್ಲಾ, ಗೋಕಾಕ ತಾಲೂಕಾ ಅಧ್ಯಕ್ಷರು ಕನ್ನಡ ಸೇನೆ

*ಇಲಾಖೆ ಮೀಟಿಂಗ ಇರುವ ಕಾರಣ ಬೆಂಗಳೂರು ಬಂದಿದ್ದು ಕಛೇರಿಗೆ ಬಂದ ನಂತರ ಪುರಸಭೆ ವ್ಯಾಪ್ತಿಯ ಕುಂದು ಕೊರತೆಗಳ ಕುರಿತು ಸಿಬ್ಬಂದಿ ಕೊಡ ಮಾತನಾಡುತ್ತೇನೆ.

                              ಎಮ್.ಎಸ್. ಪಾಟೀಲ ಮುಖ್ಯಾಧಿಕಾರಿ ಪುರಸಭೆ  ಘಟಪ್ರಭ 

ಸುದ್ದಿ ಓದಿ