ಶಿಗ್ಗಾವ್

ಎಲ್ಲರೂ ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಿ: ಮ್ಯಾಗೇರಿ

ಎಲ್ಲರೂ ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಿ: ಮ್ಯಾಗೇರಿ

ಶಿಗ್ಗಾವಿ 28 : ಇದೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲಾಗುವುದು ಕಾರಣ ಎಲ್ಲರೂ ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಸಾರ್ವಜನಿಕರಲ್ಲಿ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ. 

ಲಸಿಕೆ ಪಡೆದವರು ಹೆಚ್ಚಾದಂತೆ ಸೋಂಕು ಹರಡುವಿಕೆ ಸ್ವಾಭಾವಿಕವಾಗಿ ಕುಗ್ಗುತ್ತದೆ ಲಸಿಕೆ ಬಗ್ಗೆ ಉಹಾಪೋಹಗಳ, ತಪ್ಪು ಸಂದೇಶಗಳು, ಮಾತುಗಳು ಕೇಳಿ ಬಂದರೂ ಯಾರು ತೆಲೆ ಕೋಡಿಸಿಕೊಳ್ಳಬಾರದು ಎಲ್ಲರೂ ಆರೋಗ್ಯವಂತರಾಗ ಬೇಕೆನ್ನುವುದು ಸರಕಾರದ  ಗುರಿಯಾಗಿದೆ ಎಲ್ಲರೂ ಒಗ್ಗಟ್ಟಾಗಿ ಈ ರೋಗವನ್ನು ನಾಶ ಮಾಡಬೇಕಾಗಿದೆ ರೋಗನಿರೋಧಕ ಶಕ್ತಿ  ದೇಹದಲ್ಲಿ ಇದ್ದರೆ ಸೋಂಕು ನಮ್ಮ ದೇಹದೊಳಗೆ ಪ್ರವೇಶಮಾಡುವುದು ಕಡಿಮೆ ಎಂದು ತಜ್ಞರು ಹೇಳುತ್ತಾರೆ. 

ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತಪ್ಪದೇ ಹಾಕಿಸಿಕೊಳ್ಳುವ  ಮುಖಾಂತರ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೋಂಕು ನಿರ್ಮೂಲನೆ ಮಾಡೋಣ ಕಡ್ಡಾಯವಾಗಿ ಎಲ್ಲರೂ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಚ್ಚತೆಯಿಂದ ಆರೋಗ್ಯವಂತ ಭಾರತ ಕಟ್ಟೋಣ ಎಂದರು. ಈ ಸಂದರ್ಭದಲ್ಲಿ ಭಾ.ಜ.ಪ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ