ರಾಣೆಬೆನ್ನೂರ

ಬೆರಳೆಣಿಕೆಯಷ್ಟು ಸದಸ್ಯರು ಸೇರಿ ಸಪ್ಪೆಯಾದ ಸಾಮಾನ್ಯ ಸಭೆ: ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಅಸಮಾಧಾನ

ಬೆರಳೆಣಿಕೆಯಷ್ಟು ಸದಸ್ಯರು ಸೇರಿ ಸಪ್ಪೆಯಾದ ಸಾಮಾನ್ಯ ಸಭೆ: ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಅಸಮಾಧಾನ

ರಾಣಿಬೆನ್ನೂರ 19: ಕೋವಿಡ್ 19 ರ ಹರಡುವಿಕೆಯ ಹಿನ್ನಲೆಯಲ್ಲಿ ರಾಜ್ಯ ಲಾಕ್‍ಡೌನ್ ಆದ ಹಿನ್ನಲೆಯಲ್ಲಿ ಅನುದಾನವಿಲ್ಲದೆ ಅಭಿವೃದ್ಧಿ ಕೆಲಸಗಳು ಆಗದ ಕಾರಣ ಸದಸ್ಯರು ನಿರುತ್ಸಾಹ ತೋರಿ ಅಭಿವೃದ್ಧಿ ಪರ ಚರ್ಚೆ ನಡೆಸದೆ ಸಪ್ಪೆಯಾದ ಸಾಮಾನ್ಯ ಸಭೆ.

ಸೋಮವಾರ  ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಬೆರಳೆಣಿಕೆಯಷ್ಟು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು. 

ಸಭೆ ಪ್ರಾರಂಭವಾಗುವ ಮುನ್ನ ಧ್ವನಿವರ್ಧಕದಲ್ಲಿ ನಾಡಗೀತೆಯಲ್ಲಿ ದೋಷ ಕಂಡು ಬಂದಾಗ ಸದಸ್ಯರು ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು. ನಂತರ ಆಡಳಿತ ಪಕ್ಷದ ಸದಸ್ಯ ನೀಲಕಂಠಪ್ಪ ಕುಸಗೂರ ಮಾತನಾಡಿ, ಕೆಲವು ಇಲಾಖೆ ಅಧಿಕಾರಿಗಳು ನಿರಂತರ ಸಭೆಗೆ ಗೈರ ಆಗುತ್ತಿದ್ದಾರೆ. ತೂಕ ಮತ್ತು ಮಾಪನ, ಗ್ರಂಥಾಲಯ, 8 ನಿಗಮ ಮಂಡಳಿಯ ಅಧಿಕಾರಿಗಳು ಸಭೆಗೆ ಬಾರದೆ ಇರುವುದರಿಂದ ಜನರ ಸಮಸ್ಯೆಗಳನ್ನು ನಾವು ಯಾರಲ್ಲಿ ಕೇಳಬೇಕು. ನಗರದ ಮಾರುಕಟ್ಟೆಯಲ್ಲಿ ಸಾಕಷ್ಟು ಅನ್ಯಾಯ ನಡೆಯುತ್ತಿದೆ. ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಎಂದೂ ಸಭೆಗೆ ಹಾಜರಾಗಿಲ್ಲ ಇದರಿಂದ ಜನರ ಕುಂದು ಕೊರತೆಗಳು ಹೇಗೆ ಬಗೆಹರಿಯಬೇಕು ಎಂದು ಹರಿಹಾಯ್ದರು.

ಆಗ ತಾಪಂ ಇಓ ಟಿ.ಆರ್. ಮಲ್ಲಾಡದ ಮಾತನಾಡಿ. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಲಾಗುವುದು. ಆದರೂ ಸಹ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಭರವಸೆ ನೀಡಿದರು. ನಮ್ಮ ಅವಧಿಯೇ ಮುಗಿಯುತ್ತ ಬಂದಿದೆ ಇನ್ನೇನು ನೋಟಿಸ್ ನೀಡುವಿರಿ ಬಿಡಿ ಎಂದು ತರಾಟೆ ತಗೆದುಕೊಂಡರು.

ಸದಸ್ಯ ರಾಮಣ್ಣ ಬೆನ್ನೂರ, ಜ್ಯೋತಿ ಗೋವಿಂದಗೌಡ್ರ, ಕರಿಯಪ್ಪ ತೋಟಿಗೇರ, ರೂಪ್ಲೆಪ್ಪ ಲಮಾಣಿ, ಚೈತ್ರಾ ಮಾಗನೂರ, ಭರಮಪ್ಪ ಊರ್ಮಿ, ಗೀತಾ ಹೊಟ್ಟಿಗೌಡ್ರ ಅಲ್ಲಲ್ಲಿ ಚರ್ಚಿಸಿದ್ದು ಬಿಟ್ಟರೆ ಒಟ್ಟಾರೆ ಸಭೆ ಸಪ್ಪೆಯಾಗಿತ್ತು. ಏನು ಚರ್ಚಿಸಿದರೆ ಏನು ಪ್ರಯೋಜನೆ. ಅಧಿಕಾರಿಗಳು ತಮ್ಮ ದಾರಿಯಲ್ಲಿ ತಾವು ನಡೆದುಕೊಳ್ಳುತ್ತಾರೆ ಎಂದು ಹೆಸರು ಹೇಳದ ಕೆಲವು ಸದಸ್ಯರು ತಿಳಿಸಿದರು.

ಜಿಪಂ ಉಪವಿಭಾಗ, ಲೋಕೋಪಯೋಗಿ, ಶಿಕ್ಷಣ, ಹೆಸ್ಕಾಂ 1 ಮತ್ತು 2, ಕೃಷಿ, ತೋಟಗಾರಿಕೆ, ಪಶುಸಂಗೋಪನ, ಮಕ್ಕಳ ಮತ್ತು ಮಹಿಳಾ, ಶುದ್ಧ ಕುಡಿಯುವ ನೀರು ಸರಬರಾಜು, ಸಣ್ಣನಿರಾವರಿ ಇಲಾಖೆ, ಅಪ್ಪರ ತುಂಗಾ1 ಮತ್ತು 2, ಸಮಾಜ ಕಲ್ಯಾಣ ಇಲಾಖೆ, ತಾಲೂಕಾ ಹಿಂದುಳಿದ ಕಲ್ಯಾಣ ಇಲಾಖೆ, ರೇಷ್ಮೆ, ನಿರ್ಮಿತಿ ಕೇಂದ್ರ, ಭೂಸೇನಾ ನಗಮ, ಪಿಎಲ್‍ಡಿ ಬ್ಯಾಂಕ್, ಅಕ್ಷರ ದಾಸೋಹ, ಪ್ರಾದೇಶಿಕ ಅರಣ್ಯ, ಸಮಾಜಿಕ ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಪಟಪಟನೆ ತಮ್ಮ ಇಳಾಖೆಯ ಪ್ರಗತಿ ವರದಿಯನ್ನು ಸಭೆಗೆ ಮಾಹಿತಿ ನೀಡಿ ನೀರಾಳರಾದರು. 

ತಾಪಂ ಅಧ್ಯಕ್ಷೆ ಗೀತಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜ್ಯೋತಿ ಗಂಜಾಮದ, ಇ ಓ ಟಿ.ಆರ್. ಮಲ್ಲಾಡದ, ವ್ಯವಸ್ಥಾಪಕ ಬಸವರಾಜ ಶಿಡೆನೂರ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ