ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ
ಅನಿರ್ಧಿಷ್ಟಾವಧಿ ಧರಣಿ 5 ನೇ ದಿನಕ್ಕೆ : ಮೀನುಗಾರರ ಸಂಘಟನೆಗಳು ಭಾಗಿ;
ಕಾರವಾರ 18: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿಸಿ ಎಂದು ಗೀತಾ ಸಾವಿನ ತನಿಖಾ ಹೋರಾಟ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ 4ನೇ ದಿನ ಮುಗಿಸಿ, ಐದನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ನಿರತರಿಗೆ ಗುರುವಾರ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬೆಂಬಲ ನೀಡಿತು. ಕದರವೇ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಗೀತಾ ಬಾನಾವಳಿ ಅವರ ಕುಟುಂಬದ ಜೊತೆ ಮೀನುಗಾರರ ಸಂಘಟನೆಗಳು ಧರಣಿಯಲ್ಲಿ ಭಾಗವಹಿಸಿವೆ. ಅಮದಳ್ಳಿ ಮೀನುಗಾರರ ಸಂಘಟನೆಯ ಮುಖಂಡರು ಸಹ ಗುರುವಾರ ಧರಣಿಯಲ್ಲಿ ಭಾಗವಹಿಸಿ, ನ್ಯಾಯಕ್ಕಾಗಿ ಆಗ್ರಹಿಸಿದರು. ಗೀತಾ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು ಹಾಗೂ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತ್ ಮಾಡಿ, ಬೇರೆಡೆಗೆ ಕಳುಹಿಸಿ ಎಂದು ಆಗ್ರಹಿಸಿದರು. ವಿನಾಯಕ ಹರಿಕಂತ್ರ, ರಾಜು ತಾಂಡೇಲ ಸೇರಿದಂತೆ ಹಲವು ಮುಖಂಡರು ಧರಣಿಯಲ್ಲಿದ್ದರು.
ಗುರುವಾರ ಸಹ ಜಿಲ್ಲಾಧಿಕಾರಿ ಕಚೇರಿ ಸನಿಹದ ಸ್ಥಳದಲ್ಲೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿ ಸಂಜೆತನಕ ಧರಣಿ ಮುಂದುವರಿಸಿದರು. ಗುರುವಾರ ಜಿಲ್ಲಾಧಿಕಾರಿ ಮೆಡಿಕಲ್ ಕಾಲೇಜು ನಿರ್ದೇಶಕರನ್ನು ವಿವರಣೆ ಕೇಳಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದರು. ಆದರೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಅಪರ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ರಾಜಕುಮಾರ ಶ್ರೀವತ್ಸ ನಾಳಿನ ಕಾರ್ಯಕ್ರಮಕ್ಕೆ ಆಗಮಿಸಿದ ಕಾರಣ ಅವರನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾದ ಕಾರಣ ಕ್ರಿಮ್ಸ ನಿರ್ದೇಶಕರ, ಆರ್ ಎಂ ಓ ಜೊತೆಗಿನ ಮಾತುಕತೆ ಸಂಜೆ 5.30ರ ತನಕ ಸಾಧ್ಯವಾಗಿರಲಿಲ್ಲ.
ಬೇಡಿಕೆಗಳು : ಗೀತಾ ಸಾವಿನ ತನಿಖಾ ಸಮಿತಿ ವರದಿ ಬಹಿರಂಗಪಡಿಸಿ, ಪೋಸ್ಟಮಾರ್ಟಂ ರಿಪೋರ್ಟ ಬಹಿರಂಗ ಮಾಡಿ. ಗೀತಾ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು. ತಪ್ಪಿತಸ್ಥ ವೈದ್ಯರನ್ನು ಅಮಾನತ್ ಮಾಡಬೇಕು ಎಂಬ ಬೇಡಿಕೆಗಳನ್ನು ಧರಣಿ ನಿರತರು ಸರ್ಕಾರದ ಮುಂದಿಟ್ಟಿದ್ದಾರೆ.
ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ. ಹೋರಾಟವನ್ನು ಹಗುರವಾಗಿ ಪರಿಗಣಿಸಬೇಡಿ. ಇನ್ನು ಮುಂದೆ ಧರಣಿಯಲ್ಲಿ ಒಂದೊಂದು ಊರಿನ ಮೀನುಗಾರರು ಸರದಿಯಲ್ಲಿ ಭಾಗವಹಿಸಿಲಿದ್ದಾರೆ. ಹೋರಾಟ ಕಠಿಣ ಹಾದಿ ತುಳಿಯಲಿದೆ.
- ರಾಜು ತಾಂಡೇಲ.
ಮೀನುಗಾರರ ಮುಖಂಡ ,ಫಿಶ್ ಫೆಡರೇಶನ್ ಅಧ್ಯಕ್ಷರು.ಉತ್ತರ ಕನ್ನಡ.