ಕಂಪ್ಲಿ

ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ ಮೆರವಣಿಗೆ

ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ ಮೆರವಣಿಗೆ

ಲೋಕದರ್ಶನ ವರದಿ 

ಕಂಪ್ಲಿ  18: ಪಟ್ಟಣದ 2/11ನೇ ವಾರ್ಡ್‌ನ ಕುಂಬಾರ್ ಓಣಿಯ ಆರಾಧ್ಯ ದೇವತೆಗಳಾದ ಶ್ರೀ ಮಾರೇಮ್ಮ ಹಾಗೂ ಹುಲಿಗೆಮ್ಮ ದೇವಿಯ ಗಂಗಾಸ್ಥಳ, ಪೂಜಾ ಮಹೋತ್ಸವ ಹಾಗೂ ಉತ್ಸವ ಮೆರವಣಿಗೆ ಮಂಗಳವಾರ ಸಂಭ್ರಮದಿಂದ ನಡೆಯಿತು.  

ತುಂಗಭದ್ರಾ ನದಿ ದಂಡೆಯಲ್ಲಿ ಗಂಗಾಪೂಜೆ ಸಲ್ಲಿಸಿದ ಬಳಿಕ ಆರಂಭವಾದ ಮೆರವಣಿಗೆಯಲ್ಲಿ ಕುಂಭ, ಸುಮಂಗಲಿಯರ ಕಳಸ, ಡೊಳ್ಳು ಕುಣಿತ, ನಂದಿಕೋಲು, ಭಜನೆ, ಕೋಲಾಟ, ಚಂಡೆ, ಹುಲಿ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.  

ರಸ್ತೆಯುದ್ದಕ್ಕೂ ನೆರೆದಿದ್ದ ಭಕ್ತರು ಕಲಾ ತಂಡಗಳ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು. ಸ್ಥಳೀಯರು ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ