ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರ
ಶಿಗ್ಗಾವಿ ಸವಣೂರ ಜನತೆಗೆ ಜೀವ ಸಂಜೀವಿನಿ ಕೇಂದ್ರವಾಗಿದೆ
ಸುಧಾಕರ ದೈವಜ್ಞ
ಶಿಗ್ಗಾವಿ 19: ಕೊರೊನಾ ಎರಡನೇಯ ಅಲೆಯನ್ನು ಯಶ್ವಸಿಯಾಗಿ ನಿಭಾಯಿಸಬೇಕು ಎಂಬ ಸಂಕಲ್ಪದೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನೆಯಲ್ಲಿ 50 ಹಾಸಿಗೆಗಳ ಕೊರೊನಾ ಆರೈಕೆ ಕೇಂದ್ರ ಪ್ರಾರಂಭ ಮಾಡಿದ್ದು ಶಿಗ್ಗಾವಿ ಮತ್ತು ಸವಣೂರ ಜನತೆಗೆ ಜೀವ ಸಂಜೀವಿನಿ ಕೇಂದ್ರವಾಗಿದೆ ಎಂದು ಹೇಳಬಹುದು. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸವಣೂರ ರಸ್ತೆಯ ಸಭಾಭವನದಲ್ಲಿ 50 ಹಾಸಿಗೆಗಳ ವ್ಯವಸ್ಥಿತವಾದ ಆಸ್ಪತ್ರೆಯನ್ನು ಪ್ರಾರಂಭ ಮಾಡಿದ್ದು ಕರ್ನಾಟಕದ ಇತಿಹಾಸದಲ್ಲಿ ಬಬ್ಬ ಸಚಿವ ಕ್ಷೇತ್ರದ ಜನತೆಯ ಬಗ್ಗೆ ಇರುವ ಪ್ರೀತಿ, ವಿಶ್ವಾಸ ಮತ್ತು ಕಾಳಜಿಯನ್ನು ತೋರಿಸುತ್ತದೆ ಏಕೆಂದರೆ ಇಂದಿನ ದಿನಗಳಲ್ಲಿ ಜನರಿಂದ ದೂರವಿರುವ ಹಾಗೂ ಚುನಾವಣೆ ಸಮಯದಲ್ಲಿ ಬರುವ ಎಷ್ಟೋ ಜನಪ್ರತಿನಿಧಿಗಳನ್ನು ನೋಡುತ್ತೇವೆ ಆದರೆ ಇದಕ್ಕೆ ಹೊರತಾಗಿ ಭಾವನಾತ್ಮಕ ನೆಲೆಗಟ್ಟಿನ ಮೇಲೆ ಕೋವಿಡ ಕೇರ್ ಸೆಂಟರ್ ಮಾಡಿದ್ದು ನನ್ನ ಕ್ಷೇತ್ರದ ಜನತೆಗೆ ನಾನು ಮಾಡುತ್ತಿರುವ ಅಳಿಲು ಸೇವೆ, ಕಷ್ಟಕಾಲದಲ್ಲಿ ನಮ್ಮ ಜನರ ಕೈಹಿಡಿಯಬೇಕು ಎಂಬುದು ಬೊಮ್ಮಾಯಿಯವರ ಉದ್ದೇಶ ಈ ಕೇಂದ್ರ ಸ್ಥಾಪನೆಗೆ ಬಿಜಾಪೂರ ಸಿದ್ದೇಶ್ವರ ಸ್ವಾಮೀಜಿಗಳು ಪ್ರೇರಣೆ. ಈ ಮನೆ ಮುಂದಿನ ದಿನಗಳಲ್ಲಿ ಜನರಿಗೆ ಉಪಯೋಗವಾಗಲಿದೆ ಎಂದು ಸಿದ್ದೇಶ್ವರ ಸ್ವಾಮಿಗಳು ಹೇಳಿದ ಫಲವಾಗಿ ಅದರಂತೆ ಈಗ ಮನೆ ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಉಪಯೋಗವಾಗುತ್ತಿದೆ.
ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ನಿರ್ವಹಣೆ : ಮುಂದಿನ ದಿನಗಳಲ್ಲಿ ಎದುರಾಗಬಹುದಾದ 3ನೇ ಅಲೆಯನ್ನು ಎದುರಿಸಲು ನಾವು ಈಗಲೇ ಸಜ್ಜಾಗಬೇಕಾಗಿದೆ, ಹೀಗಾಗಿ ಕ್ಷೇತ್ರದ ಜನತೆಗೆ ಅವರ ಋಣವನ್ನು ತೀರಿಸಲು ಟ್ರಸ್ಟನ ಸಣ್ಣ ಪ್ರಯತ್ನ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ದಿನದ 24 ಗಂಟೆಯೂ ವೈದ್ಯೋಪಚಾರ ಜೊತೆಗೆ ಸ್ಥಳಿಯ ಸರಕಾರಿ ಮತ್ತು ಖಾಸಗಿ ವೈದ್ಯರು ಸಹಿತ ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ, ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗುತ್ತದೆ, ಹಣ್ಣು ಹಂಪಲು ನೀಡಲಾಗುತ್ತದೆ, ಶುಚಿತ್ವಕ್ಕೆ ಸಿಬ್ಬಂದಿ ನೇಮಕ ಮಾಡಲಾಗಿದೆ, ದಿನದ 24 ಗಂಟೆಗಳ ಕಾಲ ಶುಶ್ರೂಷಾ ಅಧಿಕಾರಿಗಳು ಇಲ್ಲಿ ಕೆಲಸ ನಿರ್ವಹಿಸುತ್ತಾರೆ, ಕೋವಿಡ್ ಸೋಂಕಿತರಿಗೆ ಇಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಅಲ್ಲದೇ ಆರೈಕೆ ಬೆಂಬಲ ನೀಡುತ್ತದೆ.ನುರಿತ ತಜ್ಞ ವೈದ್ಯರ ಸಲಹಾ ತಂಡ: ಗಂಗಮ್ಮ ಬೊಮ್ಮಾಯಿ ಟ್ರಸ್ಟ ಕೋವಿಡ ಆರೈಕೆ ಮತ್ತು ಬೆಂಬಲ ಕೇಂದ್ರದ ಸಂಪೂರ್ಣ ನುರಿತ ಸಲಹಾ ತಂಡದ ಜವ್ದಾಬಾರಿಯನ್ನು ಸರಕಾರಿ ಆಸ್ಪತ್ರೆಯ ತಜ್ಞ ವೈದ್ಯರು ಸೇರಿದಂತೆ ಖಾಸಗಿ ತಜ್ಞ ವೈದ್ಯರು ಮತ್ತು ವೈದ್ಯರು ಸಲಹಾ ಮಂಡಳಿಯ ಸದಸ್ಯರಾಗಿದ್ದು ಆದರೆ ದಿನಂಪ್ರತಿ ಕಾರ್ಯನಿರ್ವಹಿಸುವುದು ನೇಮಕವಾದ ಖಾಸಗಿ ವೈದ್ಯರು ಮತ್ತು ಶುಶ್ರೂಷಾ ಅಧಿಕಾರಿಗಳು ಮಾತ್ರ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಚಿಕಿತ್ಸೆ ಮತ್ತು ವೈದ್ಯೋಪಚಾರಕ್ಕೆ ಸಂಬಂಧಿಸಿದಂತೆ ನುರಿತ ತಜ್ಞ ವೈದ್ಯರ ತಂಡದ ಸದಸ್ಯರು ಸಲಹೆ ಸೂಚನೆ ಜೊತೆಗೆ ಆತ್ಮ ಸ್ತೈರ್ಯ ತುಂಬುವ ಕೆಲಸ ಮಾಡುತ್ತಾರೆ. ವೈದ್ಯರನ್ನು ಸಹಿತ ಗಂಗಮ್ಮ ಬೊಮ್ಮಾಯಿ ಟ್ರಸ್ಟವತಿಯಿಂದ ನೇಮಕ ಮಾಡಿದೆ ಅವರೇ ಇಲ್ಲಿ ಶಿಪ್ಟ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ನುರಿತ ಶುಶ್ರೂಷಾ (ನರ್ಸ) ಅಧಿಕಾರಿಗಳ ತಂಡ: ಈ ಒಂದು ಆರೈಕೆ ಕೇಂದ್ರದಲ್ಲಿ ವೈದ್ಯರು ಹೇಳಿದ ಚಿಕಿತ್ಸೆಯನ್ನು ಸೋಂಕಿತರಿಗೆ ನೀಡಿ ಅಂದರೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ದೈನಂದಿನ ಚಿಕಿತ್ಸೆಗೆ ಅನುಸರಣೆ ಮಾಡಿ ಗುಣಮುಖವಾಗುವಲ್ಲಿ ಪ್ರಮುಖ ಪಾತ್ರವಹಿಸುವರು ಶುಶ್ರೂಷಾ ಅಧಿಕಾರಿಗಳನ್ನು ಸಹಿತ ಗಂಗಮ್ಮ ಬೊಮ್ಮಾಯಿ ಟ್ರಸ್ಟವತಿಯಿಂದ ನೇಮಕ ಮಾಡಿದೆ ಅವರೇ ಇಲ್ಲಿ ಶಿಪ್ಟ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಶುಚಿತ್ವ ಸಿಬ್ಬಂದಿ ತಂಡ: ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರದಲ್ಲಿ ವೈದ್ಯರು ಹಾಗೂ ಶುಶ್ರೂಷಾ ಅಧಿಕಾರಿಗಳಿಗಿಂತ ಶುಚಿತ್ವ ಸಿಬ್ಬಂದಿ ತಂಡದ ಕೆಲಸ ಬಹಳ ಪ್ರಮುಖವಾಗಿದೆ ಅದರಲ್ಲಿ ಕೋವಿಡ್ ಕೇಂದ್ರಕ್ಕೆ ಬರುವುದು ಬಹಳ ಕಷ್ಟ ಆದರೂ ಸಹಿತ ಬಡತನ ಪರಿಸ್ಥಿತಿಯನ್ನು ನಿಭಾಯಿಸಲು ಕೆಲವರು ತಮ್ಮ ಪ್ರಾಣದ ಅಂಗನ್ನು ತೊರೆದು ಕಾರ್ಯನಿರ್ವಹಿಸಲು ಬರುತ್ತಾರೆ. ಶುಚಿತ್ವ ಶಿಬ್ಬಂದಿಯನ್ನು ಸಹಿತ ಗಂಗಮ್ಮ ಬೊಮ್ಮಾಯಿ ಟ್ರಸ್ಟನಿಂದ ನೇಮಕ ಮಾಡಲಾಗಿದೆ.ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆ: ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರದಲ್ಲಿ 25 ಆಕ್ಸಿಜನ್ ಕಾನ್ಸ್ನಟ್ರೇಟರ್ ಇದ್ದು ನೈಸರ್ಗಿಕವಾಗಿ ವಾತಾವರಣದ ಪೂರಕ ಆಮ್ಲಜನಕವನ್ನು ಹಿಡಿದು ಸೋಂಕಿತರಿಗೆ ಅರ್ಪಿಸುವ ವ್ಯವಸ್ಥೆ ಇದ್ದು ಇದರ ಸದುಪಯೋಗ ಇಲ್ಲಿಗೆ ಬರುವ ಸೋಂಕಿತರಿಗೆ ಅನುಕೂಲಕರವಾಗಲಿದೆ.ಊಟ ಮತ್ತು ಉಪಹಾರದ ವ್ಯವಸ್ಥೆ: ಸರಕಾರದ ನಿಯಾಮಾವಳಿ ಪ್ರಕಾರ ಬೆಳಗಿನ ಉಪಹಾರ, ಮದ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯ ಜೊತೆಗೆ ಬಿಸಿನೀರು, ಕಷಾಯ ವ್ಯವಸ್ಥೆಯನ್ನು ಗಂಗಮ್ಮ ಬೊಮ್ಮಾಯಿ ಟ್ರಸ್ಟ ಮೂಲಕ ಬಸವರಾಜ ಹೆಸರೂರ ನಿರ್ವಹಣೆ ಮಾಡುತ್ತಾರೆ.ಅಂಬ್ಯುಲೆನ್ಸ ವ್ಯವಸ್ಥೆ : ಸರಕಾರಿ ಆಸ್ಪತ್ರೆಯಿಂದ ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬರಲು ಗಂಗಮ್ಮ ಟ್ರಸ್ಟನಿಂದ ವಾಹನ ವ್ಯವಸ್ಥೆಯನ್ನು ಸಹಿತ ಮಾಡಲಾಗಿದೆ.ನೋಂದಣಿ ವ್ಯವಸ್ಥೆ: ಸರಕಾರಿ ಆಸ್ಪತ್ರೆಯಿಂದ ಬರುವ ಪ್ರತಿಯೊಬ್ಬ ಸೋಂಕಿತ ವ್ಯಕ್ತಿಯ ಮಾಹಿತಿಯನ್ನು ಪಡೆದು ನಂತರ ಅವರಿಗೆ ಚಿಕಿತ್ಸೆ ಮತ್ತು ಆರೈಕೆ ಬೆಂಬಲ ನೀಡಲಾಗುವುದು.
ಒಟ್ಟಿನಲ್ಲಿ ತಾಲೂಕಿನ ಜನತೆಗೆ ಆರೈಕೆ, ಬೆಂಬಲ, ಸಾಂತ್ವನ ಹೇಳಲು ಇಂತಹ ಸಮಾಜಮುಖಿ ಕೆಲಸ ಮಾಡಲು ಗೃಹ ಸಚಿವರು ಪಣತೊಟ್ಟಿದ್ದು ನಿಜಕ್ಕೂ ಶ್ಲಾಘನೀಯ ಕೆಲಸ ಏಕೆಂದರೆ ತಾಲೂಕಿನಲ್ಲಿ ಸಮಗ್ರ ಅಭಿವೃದ್ದಿ ಹಿನ್ನಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ, ನಿರುದ್ಯೋಗಕ್ಕೆ ಜವಳಿ ಪಾರ್ಕ ಮುಖಾಂತರ ನಿರುದ್ಯೋಗಿಗಳ ಸ್ವಾವಲಂಬನೆ, ಆರೋಗ್ಯ ಕ್ಷೇತ್ರದಲ್ಲಿ ಕಾಂತ್ರಿ ಮಾಡಲು ಇದು ಒಂದು ಸಣ್ಣ ಪ್ರಾತ್ಯಕ್ಷಿಕೆ ಎನ್ನಬಹುದು. ಏಕೆಂದರೆ ಸಾಮಾನ್ಯ ವ್ಯಕ್ತಿಗೆ ಉತ್ತಮ ಶಿಕ್ಷಣ, ಉದ್ಯೋಗ, ಉತ್ತಮ ಆರೋಗ್ಯವಿದ್ದರೆ ತಾನು ಸ್ವಾವಲಂಬಿಯಾಗಿ ಬದುಕಲು ಪ್ರೇರಣೆ ಆ ಹಿನ್ನಲೆಯಲ್ಲಿ ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರ ಕರ್ನಾಟಕದಲ್ಲಿ ಮಾದರಿ ಆರೈಕೆ ಕೇಂದ್ರವಾಗಿ ಹೊರಹೊಮ್ಮಿದೆ ಎನ್ನಬಹುದು.