ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶಕ್ಕಾಗಿ ಮನವಿ
ಮುಂಡಗೋಡ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ತಾಲೂಕು ಹಿಂದು ಜಾಗರಣ ವೇದಿಕೆಯಿಂದ ಶುಕ್ರವಾರ ಮುಂಡಗೋಡ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಿಸಿದರು.
ಸಮಾಜದ ಎಲ್ಲರು ಒಗ್ಗೂಡಿ ಆಚರಿಸುವ ಸಾಮಾಜಿಕ ಮತ್ತು ದಾರ್ಮಿಕ ಮಹತ್ವವಿರುವ ಗಣೇಶ ಚತುರ್ಥಿ ದೇಶ ಭಕ್ತ ನಾಗರಿಕರನ್ನು ಒಡೆದು ಏಕತೆ ಹಾಳು ಮಾಡಬೇಕೆಂಬ ವಿದೇಶಿ ಪ್ರೇರಿತ ಕುತಂತ್ರಿಗಳ ವಿರುದ್ದ ಸ್ವತಂತ್ರ ಹೋರಾಟ ಕಾಲದಿಂದಲೂ ಸಾರ್ವಜನಿಕ ಗಣೇಶ ಆಚರಣೆಯು ದೇಶದ ಜನರ ಮನಸ್ಸು ಮತ್ತು ಆಚರಣೆಗಳಲ್ಲಿ ರಾಷ್ಟ್ರೀಯತೆ ತುಂಬುವುದರ ಮೂಲಕ ದಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಮತ್ತು ರಾಷ್ಟ್ರೀಯತೆ ಜಾಗೃತಿ ಮೂಡಿಸುತ್ತಿದೆ.
ಕಳೆದ ವರ್ಷ ಕೋವಿಡ್ ಕರಿ ನೆರಳಿನ ನಡುವೆಯೂ ಸರ್ಕಾರದ ನಿಯಮ ಪಾಲನೆಯೊಂದಿಗೆ ವ್ಯಾಕ್ಸಿನ್ ಇಲ್ಲದೆ ಕೋವಿಡ್ ಆತಂಕದ ನಡುವೆಯೂ ಯಾವುದೇ ರೀತಿ ಗಂಭೀರ ಸಮಸ್ಯೆಗಳಿಲ್ಲದೆ ಗಣೇಶ ಚತುರ್ಥಿ ಯಶಸ್ವಿಯಾಗಿ ಆಚರಣೆ ಮಾಡಲಾಗಿದೆ.
ಪ್ರಸಕ್ತ ವರ್ಷ ಕೋವಿಡ್ ಹೆಸರಿನಲ್ಲಿ ಮತ್ತಷ್ಟು ನಿರ್ಬಂಧಗಳನ್ನು ಹೇರಿರುವ ಸರ್ಕಾರ ಪರೋಕ್ಷವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಂದ್ ಮಾಡಲು ಯತ್ನಿಸುತ್ತಿರುವುದು ಹಿಂದುಗಳ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕನ್ನು ಕಸಿದಂತೆ ಎಂದು ಆರೋಪಿಸಲಾಗಿದೆ.
ಈಗಲೂ ನಿತ್ಯ ಸಂತೆ, ರಾಜಕೀಯ ಸಮಾವೇಶ, ಚಿತ್ರ ಮಂದಿರ, ಮಾಲ್, ಚುನಾವಣೆಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಅನುಮತಿ ನೀಡಿರುವ ಸರ್ಕಾರ ತಮ್ಮ ತಮ್ಮ ಬಡಾವಣೆಗಳಲ್ಲಿ ಸಣ್ಣ ಸಂಖ್ಯೆಯಲ್ಲಿ ಜನ ಸೇರಿ ಆಚರಿಸುವ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧಿಸಿರುವುದು ಖಂಡನಿಯ.
ಆಡಳಿತ ನಿರ್ಬಂಧಗಳ ಮೂಲಕ ಹಿಂದು ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸುವ ಮತ್ತು ಯಾವುದೋ ನೆಪವೊಡ್ಡಿ ಹೊಸ ಹೊಸ ನಿರ್ಬಂಧಗಳನ್ನು ಹೇರದೆ ಗಣೇಶ ಚತುರ್ಥಿಯಂತಹ ಹಬ್ಬಗಳನ್ನು ಕೋವಿಡ್ ಜಾಗೃತಿ ಸೇರಿ ದೇಶಕ್ಕೆ ಪೂರಕವಾಗಿ ಸಾರ್ವಜನಿಕ ಜಾಗೃತಿಯ ಮಾದ್ಯಮವಾಗಿ ಉಪಯೋಗಿಸಿ ಪರಂಪರಾಗತ ಆಚರಣೆಗಳಿಗೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಸಂಚಾಲಕ ಪ್ರಕಾಶ ಬಡಿಗೇರ, ಗಣೇಶ ಶಿರಾಲಿ, ಮಲ್ಲಿಕಾರ್ಜುನ ಗೌಳಿ, ಮಂಜುನಾಥ ಹರಿಜನ, ವಿಶ್ವನಾಥ ನಾಯರ, ಮಂಜು ಮೈಸೂರ, ಗಣೇಶ ಗಾಣಿಗೇರ, ಚಂದ್ರಕಾಂತ ಸಾಳುಂಕೆ, ಕುಮಾರ ತಳವಾರ, ಏಕನಾಥ ಸಾಳುಂಕೆ, ಮಂಜುನಾಥ ಹಿರೇಮಠ, ಪ್ರದೀಪ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.