ರಾಣೇಬೆನ್ನೂರಲ್ಲಿ ಗಣೇಶ್ ಮೆರವಣಿಗೆ: ಅನ್ಯಕೋಮಿನ ಯುವಕರಿಂದ ಸಾಮರಸ್ಯ ಕದಡಿಕೆ ಆರೋಪ
ರಾಣೆಬೆನ್ನೂರು 22: ನಗರದಲ್ಲಿ ಮಂಗಳವಾರ ರಾತ್ರಿ ದುರ್ಗಾ ವೃತ್ತದಲ್ಲಿ ಸಾಗುತ್ತಿದ್ದ ಗಣೇಶ ಉತ್ಸವ ಮೂರ್ತಿಯ ವಿಸರ್ಜನ ಮೆರವಣಿಗೆಯಲ್ಲಿ ಅನ್ಯ ಕೋಮಿನ ಯುವಕರು ಹಿಂದೂ ಯುವಕರ ಮೇಲೆ, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹಲ್ಲೆಗೆ ಮುಂದಾಗಿದ್ದ ಯುವಕರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿ, ಹಿಂದೂಪರ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು ನಗರದಲ್ಲಿ ಈಗಾಗಲೇ ವಿರಾಟ್ ಹಿಂದೂ ಮಹಾಸಭಾ ಸಮಿತಿ, ಮತ್ತು ಬಜರಂಗದಳ ಹಿಂದೂ ವಿರಾಟ್ ಸಮಿತಿ ಪ್ರತಿಷ್ಠಾಪಿಸಿದ್ದ, ಎರಡು ಗಣಪತಿಗಳು ಅದ್ದೂರಿ ಮೆರವಣಿಗೆಯೊಂದಿಗೆ ಸಾಗಿ ಉತ್ಸವದ ಮೆರವಣಿಗೆ ಸರಳವಾಗಿ ಸಾಂಗತ್ಯಗೊಂಡಿತ್ತು.
ಮಂಗಳವಾರ ಇಂದಿನ ಕಾಕಿ ಗಲ್ಲಿಯ ಉತ್ಸವ ಮೂರ್ತಿಯ ಮೆರವಣಿಗೆ ಹೊರಟು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದುರ್ಗಾ ವೃತ್ತದಲ್ಲಿ, ಧಾವಿಸಿ, ಕೆಬಿ ರಸ್ತೆಯ ಮೂಲಕ ಪಿ.ಬಿ.ರಸ್ತೆ ಸೇರುವ ಪೂರ್ವದಲ್ಲಿ, ಈ ಪರಸ್ಪರ ಕೋಮಿನ ಮದ್ದೆ ಗಲಾಟೆ ನಡೆದಿದೆ ಎನ್ನಲಾಗಿದೆ. ರಾತ್ರಿ ದುರ್ಗಾ, ಸರ್ಕಲ್ನಲ್ಲಿ ಅಘಾತ ಕಾರಿ ದುರ್ಘಟನೆ, ನಡೆದು ಶಾಂತಿಪ್ರಿಯ ವಾಣಿಜ್ಯ ನಗರದಲ್ಲಿ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಸ್ಪಿ ಹನುಮಂತರಾಯ ಮತ್ತು ಎಎಸ್ಪಿ ಹಾಗೂ ಅಧಿಕಾರಿಗಳು, ಆತಂಕಕಾರಿ ಬೆಳವಣಿಗೆಗೆ ಮುಂದಾಗಿದ್ದ, ಯುವಕರನ್ನು ಚದುರಿಸಲು ಲಾಠಿ ಪ್ರಹಾರ ಮಾಡಲಾಯಿತು ಸಾವಿರಾರು ಸಂಖ್ಯೆಯಲ್ಲಿ, ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ, ದೀಡೀರನೆ ನಡೆದ ಈ ಘಟನೆ ಕಪ್ಪುಚುಕ್ಕಿ ಮೂಡಿಸಿದಂತಾಗಿದೆ. ದುರ್ಗಾ ವೃತ್ತದಲ್ಲಿ ಭಾರೀ ಪೊಲೀಸ್ ಬಂದೋಬಸ್ತು ಗೊಳಿಸಲಾಗಿದ್ದು, ಎಲ್ಲಿ ನೋಡಿದರಲ್ಲಿ ಖಾಕಿ ಖದರ್ ಎದ್ದು ಕಾಣುತ್ತಿದೆ. ನೆಡೆದ ಘಟನೆ ಕುರಿತು ಹಿಂದೂ ಪರ ಸಂಘಟನೆಯ ಮುಖಂಡರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕೂಡಲೇ ಬಂಧಿಸಬೇಕು ಮತ್ತು ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.