ಶಿಗ್ಗಾವ್

ಗಣೇಶ್ ಎಂ ಗೌಡರ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಗಣೇಶ್ ಎಂ ಗೌಡರ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಶಿಗ್ಗಾವಿ 17: ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗಣೇಶ್ ಎಂ ಗೌಡರ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಸ್ವೀಕರಿಸಿದ್ದಾರೆ. 

ಅಗ್ನಿಶಾಮಕ ಮತ್ತು ತುರ್ತಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ನಾಗರೀಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಹಾಗೂ ಅವರ ಉತ್ತಮ ಕಾರ್ಯದ ನಿರ್ವಹಣೆಯನ್ನು ಪುರಸ್ಕರಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. 

ಈ ಸಾರ್ಥಕ ಸೇವೆಗೆ ಅಗ್ನಿಶಾಮಕ ಠಾಣೆಯ ಸರ್ವರೂ, ಅಭಿಮಾನಿಗಳು ಹಾಗೂ ಶಿಗ್ಗಾವಿ ವೀರಕೇಸರಿ ಸೇವಾ ಸಮಿತಿಯವರ ಹರ್ಷವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ