ಯರಗಟ್ಟಿಯಲ್ಲಿ ಸಂಪ್ರದಾಯಿಕ ವಾದ್ಯಗೋಷ್ಠಿಗಳೊಂದಿಗೆ ಗಣೇಶ ವಿಸರ್ಜನೆ
ಯರಗಟ್ಟಿ 24: ಗಣೇಶ ಚತುರ್ಥಿಯು ಹಿಂದುಗಳಿಗೆ ಅತ್ಯಂತ ಮಹತ್ವವಾದ ಧಾರ್ಮಿಕ ಹಬ್ಬಗಳಲ್ಲೊಂದಾಗಿದ್ದು ಈ ಹಬ್ಬವನ್ನು ವಿನಾಯಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಗಣೇಶನನ್ನು ಪೂಜಿಸುವ ಈ ಹಬ್ಬವನ್ನು ನಾನಾ ಕಡೆಗಳಲ್ಲಿ ವಿವಿಧ ರೀತಿಗಳಿಂದ ಆಚರಿಸಲಾಗುತ್ತಿದ್ದು, ಗಣೇಶನನ್ನು ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ನಿವಾರಿಸುವ ವಿಘ್ನವಿನಾಶಕ ಎಂದು ನಂಬುತ್ತಾರೆ.ಯರಗಟ್ಟಿ ಪಟ್ಟಣದಲ್ಲಿ ಶಾಂತಿಯುತವಾಗಿ ಭಾರತೀಯ ಸಂಸ್ಕೃತಿ ಪ್ರಕಾರ ಕರಡಿ ಮಜಲು, ಜಾಂಜಪದಕ, ಡೋಳ್ಳು ಮೇಳೆ, ತಮಟೆ ಮೇಳೆ, ಭಜನಾ ಮಂಡಳಿ ಮೂಲಕ ಗಣೇಶನ್ನು ವಿಸರ್ಜನೆ ಮಾಡಲಾಯಿತು. ಪ್ರತಿವರ್ಷ ಡಿಜೆ ಬಳಿಸಿ ಗಣೇಶ ವಿಸರ್ಜನೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಶಾಂತಿಯುತವಾಗಿ ಮಹಿಳೆಯರು, ಮಕ್ಕಳು ನೋಡುವಂತೆ ಸುಂದರವಾಗಿ ವಿಸರ್ಜನೆ ಮಾಡಲಾಯಿತು.
ಯರಗಟ್ಟಿ ಪಟ್ಟಣದಲ್ಲಿ ಸ್ಥಾಪಿಸಿದ್ದ ಸಾರ್ವಜನಿಕ ಗಜಾನನ ಮಂಡಳಿ ಸದಸ್ಯರು ಹಾಗೂ ಪಟ್ಟಣದ ನಿವಾಸಿಗಳು ಭಾರತೀಯ ಸಂಸ್ಕೃತಿ ಪ್ರಕಾರ ಗಣೇಶ ವಿಸರ್ಜನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಗಣೇಶ ವಿಸರ್ಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ಆಯ್. ಎಂ. ಮಠಪತಿ, ಸಿಪಿಐ ಮುರಗೋಡ ಠಾಣೆ
ಈ ಭಾರಿ ಪಟ್ಟಣದ ಸಾರ್ವಜನಿಕ ಗಜಾನನ ಮಂಡಳಿಯವರು ಡಿಜೆ ಬಳಿಸದೆ ಸರಳವಾಗಿ ನಮ್ಮ ಸಂಪ್ರದಾಯದಂತೆ ಸಕಲ ವಾದ್ಯಗೋಷ್ಠಿಗಳ ಮೂಲಕ ಗಣೇಶ ವಿಸರ್ಜನೆ ಮಾಡಿದ್ದು ಸಂತೋಷ ತಂದಿದೆ. ಈ ನಮ್ಮ ಭಾರತೀಯ ಪರಂಪರೆಯ ಮೂಲಕ ಗಣೇಶ ವಿಸರ್ಜನೆ ಮಾಡಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲ. ಪೊಲೀಸ್ ಇಲಾಖೆ ಅಧಿಕಾರಿಗಳ ಸಹಕಾರದಿಂದ ಸರಳ ಗಣೇಶ ವಿಸರ್ಜನೆಯಾಗಿದೆ.
ಶೇಖವ್ವ ನಾವಿ, ಪಟ್ಟಣದ ನಿವಾಸಿ