ತಾಳಿಕೋಟಿ

ಜೈಲಿಗಟ್ಟಿದರೂ, ಎದೆಗೆ ಗುಂಡಿಟ್ಟರು ಪದ್ಧತಿ ಬಿಡೋದಿಲ್ಲ

ಜೈಲಿಗಟ್ಟಿದರೂ, ಎದೆಗೆ ಗುಂಡಿಟ್ಟರು ಪದ್ಧತಿ ಬಿಡೋದಿಲ್ಲ
ತಾಳಿಕೋಟೆ ಪಟ್ಟಣದ ಹಿಂದು ಮಹಾಗಣಪತಿ ಮಹಾಮಂಡಳದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

9 ದಿನ ಗಣಪತಿ ಪ್ರತಿಷ್ಠಾಪನೆಗೆ ಹಿಂದೂ ಮಹಾಗಣಪತಿ ಮಂಡಳಿಯ ನಿರ್ಣಯ

ತಾಳಿಕೋಟೆ09: ಹಿಂದೂಗಳ ಹಬ್ಬ ಹರಿದಿನಗಳು ಬಂದಾಗ ಷರತ್ತುಗಳನ್ನು ವಿಧಿಸುವ ಮೂಲಕ ಭಕ್ತರ ಭಾವನೆಗಳಿಗೆ ಬೆಂಕಿ ಇಡುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ. ಇಂತಹ ಆಸಂಬದ್ಧ ಷರತ್ತುಗಳನ್ನು ಹಿಂಪಡೆದು, ಮೊದಲಿನಂತೆ ಗಣೆಶೋತ್ಸವಕ್ಕೆ ಅವಕಾಶ ನೀಡಬೇಕು. ಪಟ್ಟಣದಲ್ಲಿ ಹಿಂದು ಮಹಾಗಣಪತಿ ಮಹಾಮಂಡಳದ ವತಿಯಿಂದ 9 ದಿನದ ಗಣೇಶೋತ್ಸವ ಮಾಡುತ್ತೇವೆ. ಜೈಲಗಟ್ಟಿದರೂ, ಎದೆಗೆ ಗುಂಡಿಟ್ಟರು 9 ದಿನದ ಗಣಪತಿ ಮಾಡುವದನ್ನು ನಿಲ್ಲಿಸುವದಿಲ್ಲ ಎಂದು ಪಟ್ಟಣದ ಹಿಂದೂ ಮಹಾಗಣಪತಿ ಮಹಾಮಂಡಳಿಯ ಗೌರವ ಉಪಾಧ್ಯಕ್ಷ,  ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಪಿಠಾಧ್ಯಕ್ಷ ಸೋಮಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ತಿಲಕ ರಸ್ತೆಯ ಹಿಂದೂ ಮಹಾ ಗಣಪತಿ ಮಹಾಮಂಡಳಿಯ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕಾರಣಿಗಳ ಕಾರ್ಯಕ್ರಮವಿದ್ದಾಗ ಷರತ್ತುಗಳಿರುವದಿಲ್ಲಾ, ಮೆರವಣಿಗೆ ಮಾಡಬಹುದು. ಆದರೆ ಹಿಂದೂಗಳ ಹಬ್ಬ ಹರಿದಿನಗಳ ಬಂದಾಗ ಷರತ್ತುಗಳನ್ನು ವಿಧಿಸುವ ಮೂಲಕ ಭಕ್ತರ ಭಾವನೆಗಳಿಗೆ ದಕ್ಕೆ ತರುವಂತಹ ಕೆಲಸ ಸರ್ಕಾರ ಮಾಡುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರವಿದೆ, ಸಿದ್ಧಾಂತವಿದೆ. ಹಿಂದೂ ಧರ್ಮದ ದೊಡ್ಡ ಹಬ್ಬ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಹಬ್ಬ ಇದಾಗಿದೆ. ಭಕ್ತರ ಮನೆ ಮನೆಗಳಲ್ಲಿ ಪೂಜೆ ಪುನಃಸ್ಕಾರ ಮಾಡುವದು ಹೆಚ್ಚು ಇಂತಹ ಉತ್ಸವಕ್ಕೆ 5 ದಿನ ಮಾತ್ರ ಗಣಪತಿ ಕುಡಿಸಬೇಕು. ಗಣಪತಿ ಇಷ್ಟೇ ಇರಬೇಕು ಎಂಬುದು ಸರಿಯಾದ ಕ್ರಮವಲ್ಲಾ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತೇವೆ ಆದರೆ ಈ ಭಾಗದಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ವಿಶೇಷತೆ ಇದೆ. ಮೊದಲಿನಿಂದಲೂ ಮಾಡುತ್ತಾ ಬಂದಿರುವಂತಹ ಪದ್ಧತಿಯಾಗಿದೆ. ಇಂಥ ಭಾವನೆಗಳಿಗೆ ಸರಕಾರ ಮನ್ನಣೆ ನೀಡಬೇಕು. ಸರಕಾರ ವಿಧಿಸಿದ ಕೋವಿಡ್ ಎಲ್ಲ ಮಾರ್ಗಸೂಚಿಯನ್ನು ಪಾಲಿಸಲಾಗುತ್ತದೆ. ಹಿಂದುಗಳು ಸಾರ್ವಜನಿಕವಾಗಿ ಕಾನೂನು ಗೌರವಿಸುತ್ತ ಬಂದಿದ್ದಾರೆ. ಆದರೆ ಇಷ್ಟೇ ದಿನ ಪೂಜಿಸಬೇಕು ಎಂಬ ಸರಕಾರದ ಫರ್ಮಾನನ್ನು ಒಪ್ಪಲಾಗುವದಿಲ್ಲವೆಂದು ಕಿಡಿ ಕಾರಿದರು.

ರಾಜಕೀಯ ಕಾರ್ಯಕ್ರಮಗಳಲ್ಲಿ ಬೇಕಾಬಿಟ್ಟಿಯಾಗಿ ಸೇರುವ ಜನಸಂದಣಿ ಸರಕಾರದ ಗಮನಕ್ಕೆ ಬರುವದಿಲ್ಲ. ದೊಡ್ಡ ರಾಜಕಾರಣಿಗಳ ಮನೆಯ ಮದುವೆಯಲ್ಲಿ ಸೇರುವ ಸಹಸ್ರಾರು ಜನಸಂದಣಿ ಸರಕಾರದ ಕಣ್ಣಿಗೆ ಬೀಳುವದಿಲ್ಲ. ಪಾಲಿಕೆಗಳ ಚುನಾವಣಾ ಫಲಿತಾಂಶ ಬಂದಾಗ ದೊಡ್ಡ ಪ್ರಮಾಣದಲ್ಲಿ ಜನರು ಸೇರಿದಾಗ ಕೋವಿಡ್ ಇರುವದಿಲ್ಲ. ಆದರೆ ಒಂದು ಭಾವನೆ ಮತ್ತು ಶ್ರದ್ಧಾ ಭಕ್ತಿಯ ಆರಾಧನೆ ಮೂರ್ತಿಯಾದ ಗಣೇಶೋತ್ಸವಕ್ಕೆ ಶರತ್ತುಗಳನ್ನು ವಿಧಿಸುವದೇಕೆ. ನಮ್ಮಲ್ಲಿ ಭಕ್ತಿ ಇದೆ ನಮ್ಮ ಸಿದ್ಧಾಂತವಿದೆ ವೇದ ಪುರಾಣಗಳಿಂದ ಬಂದಂತ ಪದ್ಧತಿಯಾಗಿದೆ ಹಿಂದೂ ಧರ್ಮಕ್ಕೆ ಅಪವಾದವಾಗುವಂತಹ ಕೆಲಸ ಮಾಡಬಾರದು. ಮಂಡಳಿಯ ವತಿಯಿಂದ  ಮೊದಲಿನಿಂದಲೂ 9 ದಿನಗಳ ಕಾಲ ಗಣೇಶ ಉತ್ಸವ ಆಚರಿಸುತ್ತಾ ಬಂದಿದೇವೆ. ಈ ವರ್ಷವೂ ಸಹ ಹಿಂದೂ ಧರ್ಮದ ಪದ್ಧತಿಯಂತೆ ನಾವು 9 ದಿನ ಗಣೇಶನ ಉತ್ಸವ ನಾವು ಮಾಡಿಯೇ ತಿರುತ್ತೇವೆ ಇದರಲ್ಲಿ ಬದಲಾವಣೆಗಳಿಲ್ಲಾ ಎಂದರು.

 ಮಹಾ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ವೇ.ಸಂತೋಷಬಟ್ ಜೋಶಿ, ಕಾಶಿನಾಥ ಅರಳಿಚಂಡಿ,  ಪ್ರಕಾಶ ಪಾಟೀಲ, ಆನಂದ ಹಜೇರಿ, ಗುರುರಾಜ ಕಲಾಲ, ವಿಜಯ ಕಲಾಲ, ಪ್ರತೀಕ ಮಹೇಂದ್ರಕರ, ವಿಠ್ಠಲ ಹಜೇರಿ, ಅಶ್ವಿನ ಬೇದರಕರ, ಬಾಬು ಆಗಸರ, ಗಜದಂಡಯ್ಯಸ್ವಾಮಿ ಹಿರೇಮಠ, ಕಿರಣ ಬಡಿಗೇರ, ಕಿಶೋರ ಕುಮಠೆ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ