ಬ್ಯಾಡ್ಗಿ

ಗಾಂಧೀಜಿಯವರ ಜೀವನ ತೆರೆದ ಪುಸ್ತಕವಿದ್ದಂತೆ: ಶಾಸಕ ಬಸವರಾಜ ಶಿವಣ್ಣನವರ

ಗಾಂಧೀಜಿಯವರ ಜೀವನ ತೆರೆದ ಪುಸ್ತಕವಿದ್ದಂತೆ: ಶಾಸಕ ಬಸವರಾಜ ಶಿವಣ್ಣನವರ

ಬ್ಯಾಡಗಿ 03: ಗಾಂಧೀಜಿಯವರ ಜೀವನ ತೆರೆದ ಪುಸ್ತಕವಿದ್ದಂತೆ ಅವರ  ಆದರ್ಶ ತತ್ವಗಳನ್ನು ಇಂದು ನಾವು ಪಾಲನೆ ಮಾಡುವ ಪಣತೊಡಬೇಕಿದೆಯಲ್ಲದೇ ಪ್ರತಿಯೊಬ್ಬರೂ ಪಾಲಿಸಿಕೊಂಡು ಹೋಗಬೇಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಅವರು ಬುಧವಾರ ಸ್ಥಳೀಯ ತಹಶೀಲ್ದಾರರ ಸಭಾಭವನದಲ್ಲಿ 155ನೇ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಾಂಧೀಜಿಯವರ ಸಂದೇಶಗಳು ಇಂದಿಗೂ ಕೂಡ ಸರ್ವ ಸತ್ಯವಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರು ಗ್ರಾಮಗಳ ಅಭಿವೃದ್ಧಿ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಆಶಯ ಹೊಂದಿದ್ದರು. ಅವರ ಕನಸನ್ನು ನನಸು ಮಾಡಲು ನಮ್ಮ ಸರ್ಕಾರ ಸನ್ನದ್ಧವಾಗಿದೆ ಎಂದರು.ಮಧ್ಯ ರಾತ್ರಿಯಲ್ಲಿ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ದೇಶವಾಗಬೇಕು, ದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕೆನ್ನುವ ಮಹಾದಾಸೆ ಅವರದ್ದಾಗಿತ್ತೆಂದರು.ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿಗಾಂಧೀಜಿ ಮೊದಲು ಆಫ್ರಿಕಾ ದೇಶದಲ್ಲಿ ಜನಾಂಗೀಯದ ಬಗ್ಗೆ ಎದ್ದಿದ್ದ ತಾರತಮ್ಯದ ವಿರುದ್ಧ ಹೋರಾಟ ನಡೆಸುವ ಮೂಲಕ ಹೋರಾಟದ ಮನೋಭಾವ ಬೆಳೆಸಿಕೊಂಡರು.  

ನಂತರ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು ಸ್ವಚ್ಛತೆ, ಸ್ವಾತಂತ್ರ್ಯ, ಸಂಸ್ಕಾರದ ಬಗ್ಗೆ ಕಳಕಳಿ ಹೊಂದಿದ್ದರೆಂದರು. ಕಾರ್ಯಕ್ರಮದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಭಜನಾ ಪದಗಳನ್ನು ಭಜಿಸಲಾಯಿತು.ಈ ಸಂದರ್ಭದಲ್ಲಿ  ತಾ.ಪಂ.ಕಾರ್ಯನಿರ್ವಾಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಹೊಳೆಪ್ಪಗೋಳ, ಉಪ ತಹಶೀಲ್ದಾರ ಜಿ.ಎಂ.ಅಕ್ಷತಾ, ಬಿಇಓ ಎಸ್‌.ಜಿ.ಕೋಟಿ,ಕೃಷಿ ಅಧಿಕಾರಿ ಗಣೇಶ ಕಮ್ಮಾರ, ಅಕ್ಷರ ದಾಸೋಹ ಅಧಿಕಾರಿ ಎನ್‌.ತಿಮ್ಮಾರಡ್ಡಿ,  ಮುಖಂಡರಾದ ಸುಭಾಸ ಮಾಳಗಿ, ನಾಗರಾಜ್ ಆನ್ವೇರಿ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ