ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಕಾರ್ಯಕ್ರಮ
ಯರಗಟ್ಟಿ 23: ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ ಟ್ರಸ್ಟ್ ಕಚೇರಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಕಾರ್ಯಕ್ರಮದ ಪೂರ್ವ ಬಾವಿ ಸಭೆಯನ್ನು ಯರಗಟ್ಟಿ ಯೋಜನಾ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಷ ಹನಸಿ, ಜಿಲ್ಲೆಯ ನಿರ್ದೇಶಕ ಲವಕುಮಾರ, ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಸೋಮಶೇಖರ್ ಮಗದುಮ, ನಿಕಟಪೂರ್ವ ಅಧ್ಯಕ್ಷ ಅಶೋಕ ಕುಲಗೋಡ, ಮಹಾಂತೇಶ ಆಳಾಜ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಗಣ್ಯರು, ಒಕ್ಕೂಟದ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಜಿಲ್ಲಾ ನೀರ್ದೇಶಕರು ಮಾತನಾಡಿ ಯೋಜನೆಯ ಬಹುಮುಖಿ ಕಾರ್ಯಕ್ರಮಗಳ ಪರಿಚಯ ಮಾಡಿದರು, ಸದರಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಿ, ಅತಿಥಿಗಳ ಆಯ್ಕೆ, ಕಾರ್ಯಕ್ರಮದ ಸ್ಥಳ, ಸಂಪನ್ಮೂಲಗಳ ಕ್ರೂಢಿಕರಣ, ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಸ್ತು ರೂಪದಲ್ಲಿ ಹಲವಾರು ಜನರು ಸಾಮಗ್ರಿಗಳನ್ನು ನೀಡುವ ಬಗ್ಗೆ ತಿಳಿಸಿರುತ್ತಾರೆ.
ಕಾರ್ಯಕ್ರಮಕ್ಕೆ ತಾಲೂಕಿನ ಯೋಜನಾಧಿಕಾರಿ ಸತೀಶ. ಡಿ ಸ್ವಾಗತಿಸಿದರು, ಮೇಲ್ವಿಚಾರಕ ನಾಗೇಂದ್ರ ನಿರೂಪಿಸಿ, ಸವದತ್ತಿ ತಾಲೂಕಿನ ಯೋಜನಾಧಿಕಾರಿ ಆಶಾ ಕುಮಾರಿ ವಂದಿಸಿದರು.