ಗದಿಗೆಪ್ಪ ಕಾಳೆ 67ನೇ ವರ್ಷದ ಜನ್ಮ ದಿನಾಚರಣೆ
ಶಿಗ್ಗಾವಿ 26: ದಿವಂಗತ ಗದಿಗೆಪ್ಪ ಕಾಳೆ ಅವರ 67 ನೇ ವರ್ಷದ ಜನ್ಮ ದಿನಾಚರಣೆ ನಿಮಿತ್ಯ ಅವರ ಕುಟುಂಬ ವರ್ಗದವರು ರಾಜೀವ ನಗರದ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿದರು.
ನಂತರ ಮಾತನಾಡಿದ ಅಶೋಕ ಮತ್ತು ಮಲ್ಲಿಕಾರ್ಜುನ ನಮ್ಮ ತಂದೆಯವರ ಸವಿನೆನಪಿಗಾಗಿ ಪ್ರತಿ ವರ್ಷವು ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಮಾಡಲು ವಾಗ್ದಾನ ಮಾಡಿದರು.
ಪ್ರಧಾನ ಗುರುಗಳು ಕೆ.ಹೆಚ್.ಕುರುಬರ, ಸಹಶಿಕ್ಷಕಿ ಮಂಗಳಾ ಕಾಳೆ, ಸಿಆರ್ಪಿ ಮೀಸಿ, ಸಮಾಜಸೇವಕ ಹನುಮಂತ ಬಂಡಿವಡ್ಡರ, ಈರ್ಪ ಹಳೇಪ್ಪನವರ, ತಿರಕಪ್ಪ ಹಡಪದ, ನೀಲವ್ವ ಕಾಳೆ, ಮಂಜುಳಾ ಬಾರಿಗಿಡದ ಸೇರಿದಂತೆ ಮುದ್ದು ಮಕ್ಕಳು ಉಪಸ್ಥಿತರಿದ್ದರು.