ಗದಗ ಹೊನ್ನಳಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ: ಜಮೀನು ಸ್ವಾಧೀನ, ಪರಿಹಾರಕ್ಕೆ ರೈತರ ಆಗ್ರಹ
ರಾಣೇಬೆನ್ನೂರು:ಸೆ 3 ನಗರದ ಹೊರವಲಯದಲ್ಲಿ ಗದಗನಿಂದ ಹೊನ್ನಾಳಿ ವರೆಗೆ ರಾಜ್ಯ ಹೆದ್ದಾರಿ ರಸ್ತೆಯ ಕಾಮಗಾರಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಉತಾರದಲ್ಲಿ ರೈತರ ಹೆಸರನ್ನು ಕಡಿಮೆ ಮಾಡಿದೇ, ಹಾಗೂ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿ ನಂತರ ಕಾಮಗಾರಿ ಕಾರ್ಯಾರಂಭ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಹನುಮಂತಪ್ಪ ಕಬ್ಬಾರ್ ಆಗ್ರಹಿಸಿದರು.
ಅವರು ರವಿವಾರ ನಗರ ಹೊರವಲಯ ಕೆಶಿಪ್ ರಾಜ್ಯ ಹೆದ್ದಾರಿ ಕಾಮಗಾರಿ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದರು., ತಾಲೂಕು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಶಿಪ್, ತಾಲೂಕ ದಂಡಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಕಳೆದ ಮೂರು ತಿಂಗಳ ಹಿಂದೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಪರಿಗಣಿಸದೆ ಕಾಮಗಾರಿಯನ್ನು ಮುಂದುವರಿಸಿದ್ದಾರೆ. ಹಾಗಾಗಿ ಇಂದು ರೈತ ಮುಖಂಡರು ಸೇರಿಕೊಂಡು ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ಬಂದು ಮಾಡಿ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾಗಿದ ಪರಿಹಾರವನ್ನು ನೀಡಲೇಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಲಕಪ್ಪ ಶೆಟ್ರಗೋಣಿಮ್ಮನವರ ಇವರ ಜಮೀನು ಸರ್ವೆ ನಂಬರ 403/ಅ1 ರಲ್ಲಿ ಕೆ.ಶಿ.ಪ್ ರಸ್ತೆ ಕಾಮಗಾರಿಗಾಗಿ ರಾಜ್ಯ ಹೆದ್ದಾರಿಗೆ 29 ಗುಂಟೆ ಜಾಗವನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ 10ಗುಂಟೆ ಮಾತ್ರ ರೈತ ಜಮೀನು ಕಳೆದುಕೊಂಡಿದ್ದಾನೆ. ಜಮೀನಿನ ಪರಿಹಾರವನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಆದರೆ ಇನ್ನು ಪಕ್ಕದಲ್ಲಿ 403/ಅ2, 403/ಅ3 ರಲ್ಲಿ ರೈತರ ಜಮೀನು ತೆಗೆದುಕೊಂಡಿದ್ದಾರೆ. ಜಿಯ್ ಸಿ ಒಳಗೆ ರಸ್ತೆ ಮಾಡಿದ್ದು ಅವರಿಗೆ ಅಧಿಕಾರಿಗಳು ಪರಿಹಾರ ನೀಡಿಲ್ಲ. ಹಾಗಾಗಿ ನಾವು ಸ್ಥಳಕ್ಕೆ ಬಂದು ಕಾಮಗಾರಿಯನ್ನು ಬಂದ್ ಮಾಡಿದ್ದೇವೆ. ಗ್ರಾಮೀಣ ಪೊಲೀಸ್ ಠಾಣಾ ಸಿಪಿಐ ಅವರಿಗೆ ಮನವಿ ಪತ್ರವನ್ನು ನೀಡಿ ಭದ್ರತೆ ನೀಡುವಂತೆ ಕೇಳಿಕೊಂಡಿದ್ವಿ ಅವರು ಸಹ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಡಲು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾಮಗಾರಿಯನ್ನು ಆರಂಭ ಆಗದಂತೆ ಈಗಾಗಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಹಾಗಾಗಿ ನಾವು ಈ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದೇವೆ ಎಂದರು.
ರೈತರಾದ ಕುರುವತ್ತೆಪ್ಪ ಗೋಣೆಮ್ಮನವರ, ಮಂಜುನಾಥ್ ಗೋಣೆಮ್ಮನವರ, ಸಿದ್ದಪ್ಪ ಕ್ಯಾತಮ್ಮನವರ, ಪ್ರಕಾಶ ಶ್ಯಾಮನೊರ, ನವೀನ ಪಾಟೀಲ್, ಗಣೇಶ ಹುಗ್ಗಿ, ಚೇತು ಕುಡುಪಲಿ, ಅಜಯ ಗೋಣೆಮ್ಮನವರ, ನಂದೀಶ್ ಹೊನ್ನಾಳಿ ಮತ್ತಿತರ ರೈತರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.