ಭಾರತಿ ಛಬ್ಬಿಗೆ ಗಾನ ಜೀವಿ ಪ್ರಶಸ್ತಿ
ಶಿಗ್ಗಾವಿ 30: ಕರ್ನಾಟಕ ರಾಜ್ಯ ಕರುನಾಡ ಹಾಡುಗಾರರ ಬಳಗ ಇದರ 100ನೇ ಸಂಚಿಕೆಯ ಹಾಡು ಹಬ್ಬ ಕಾರ್ಯಕ್ರಮ ಸವಣೂರ ತಾಲೂಕಿನ ವಿನಾಯಕ ಕೃಷ್ಟ ಗೋಕಾಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಗ್ಗಾವಿಯ ಖ್ಯಾತಜಾನಪದ ಕಲಾವಿದೆ ಭಾರತಿ ಛಬ್ಬಿಯವರಿಗೆ ರಾಜ್ಯ ಮಟ್ಟದ ಗಾನ ಜೀವಿ ಎಂಬ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ದೊಡ್ಡಹುಣಸೆಮರ, ಕ.ಹಾ.ಬ. ರಾಜ್ಯಾಧ್ಯಕ್ಷ ವೀರಯ್ಯ ಸಂಕೀನಮಠ, ಗೌರವಾಧ್ಯಕ್ಷರುಗ್ಯಾರಂಟಿರಾಮಣ್ಣ, ಶಿಗ್ಗಾವಿ ಸಾಹಿತಿ ಶಿವಾನಂದ ಮ್ಯಾಗೇರಿ, ಪುರಸಭೆಅಧ್ಯಕ್ಷೆ ಶೈಲಾ ಮುದಿಗೌಡ್ರ, ಡಾ.ಲತಾ ನಿಡಗುಂದಿ ಸೇರಿದಂತೆ ಸಾಹಿತಿಗಳು ಮತ್ತುಕರುನಾಡ ಹಾಡುಗಾರರ ಬಳಗ ಸರ್ವಸದಸ್ಯರುಉಪಸ್ಥಿತರಿದ್ದರು.