ಗುಡುಗು ಸಹಿತ ಜಿಟಿಜಿಟಿ ಮಳೆ: ಜನತೆ ತತ್ತರ
ಲೋಕದರ್ಶನ ವರದಿ
ರಾಣಿಬೆನ್ನೂರ 23: ತಾಲೂಕಿನಾದ್ಯಂತ ಗುಡುಗು ಸಹಿತ ಜಿಟಿಜಿಟಿ ಮಳೆಯಿಂದಾಗಿ ನಗರದ ಜನತೆ ತತ್ತರಿಸುವಂತಾಗಿದೆ. ಗುರುವಾರ ಬೆಳಗಿನ ಜಾವ 4 ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ನಗರ ಹಾಗೂ ಗ್ರಾಮೀಣ ಭಾಗದ ಜನರು ಪರಿತಪಿಸುವಂತಾಗಿದೆ. ತಾಲೂಕಿನಲ್ಲಿ 4 ಮನೆಗಳು ಕುಸಿದಿವೆ.
ನಗರದಲ್ಲಿ 2 ಮನೆಗಳು ಮತ್ತು ತಾಲೂಕಿನ ಕರೂರ ಗ್ರಾಮದಲ್ಲಿ 1 ಹಾಗೂ ಕುಪ್ಪೇಲೂರ ಗ್ರಾಮದಲ್ಲಿ 1 ಮನೆ ಭಾಗಸಹ ಕುಸಿದು ಬಿದ್ದವೆ. ಯಾವುದೇ ಪ್ರಾಣ ಹಾನಿಯಾದ ವರದಿಯಾಗಿಲ್ಲ ಎಂದು ತಹಶಲ್ದಾರ ಶಂಕರ ಜಿ.ಎಸ್. ತಿಳಿಸಿದರು.
ಈ ಜಿಟಿ ಜಿಟಿ ಮಳೆಯಿಂದ ನಗರಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೆಲವು ರಸ್ತೆಗಳು ಕೆಸರು ಗದ್ದೆಯಂತಾಗಿ ಸಂಚಾರಕ್ಕೆ ವ್ಯಥೆ ಉಂಟಾಗಿತ್ತು. ತಾಲೂಕಿನ ಮಾಕನೂರ ಗ್ರಾಮದ ಕರಲಗೇರಿ ರಸ್ತೆಯು ಕೆಸರು ಗದ್ದೆಯಂಗಾಗಿ ವಿದ್ಯುತ್ ಕಂಬಗಳು ವಾಲುತ್ತಿರುವದಲ್ಲಿ ಮನಗಂಡ ಹೆಸ್ಕಾಂ ಕಾಮರ್ಿಕರು ಕಂಬಗಳ ದುರಸ್ತಿ ಕಾರ್ಯಗಳನ್ನು ಮಾಡಿ. ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಎಲ್ಲಿಯೂ ಸಹ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿನ ದೇವರಗುಡ್ಡ ರಸ್ತೆಯ ರೈಲ್ವೆ ಸೇತುವೆ ಕೆಳಗಿನ ಭಾಗದಲ್ಲಿ ಆಳೇತ್ತರದ ನೀರು ತುಂಬಿ ಜನರ ಮತ್ತು ವಾಹನ ಸಂಚಾರ ಸ್ಥಗೀತಗೊಂಡಿದ್ದು ಕಂಡು ಬಂದಿತು