ಕಾರವಾರ

ವಿಶೇಷ ಗ್ರಾಮ ಸಭೆ ಮೂಲಕ ಕೋವಿಡ್-19 ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ- ಸಿಇಒ ಪ್ರಿಯಾಂಗಾ

ವಿಶೇಷ ಗ್ರಾಮ ಸಭೆ ಮೂಲಕ ಕೋವಿಡ್-19 ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ- ಸಿಇಒ ಪ್ರಿಯಾಂಗಾ
ಜಿ.ಪಂ.ಸಾಮಾನ್ಯ ಸಭೆ

ಕಾರವಾರ 17 : ಅರವತ್ತು ವರ್ಷ ಮೇಲ್ಪಟ್ಟ ಹಾಗೂ 45 ರಿಂದ 59 ವರ್ಷ ವಯೋಮಾನದ ಎಲ್ಲ ನಾಗರಿಕರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‍ನಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‍ನ ಸಿಇಒ ಪ್ರಿಯಾಂಗಾ  ಹೇಳಿದರು.

ಕಾರವಾರದ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಅವರು ಕೋವಿಡ್-19 ಎರಡನೇ ಅಲೆಯ ತಡೆಗಾಗಿ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್-19 ಎರಡನೇ ಅಲೆ ತಡೆಗಾಗಿ ರಾಜ್ಯ ಸರಕಾರವೇ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರ, ಕೇರಳಾ ಸೇರಿದಂತೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್-19 ಪರೀಕ್ಷೆ ಮಾಡಿಸಿದ 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕಾಗಿದೆ.  ಅಲ್ಲದೇ ಮುಖ್ಯಮಂತ್ರಿಗಳು ಈ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಜೊತೆ ವಿಡಿಯೋ ಸಂವಾದ ನಡೆಸಿ ಕೋವಿಡ್-19 ಎರಡನೇ ಅಲೆ ತಡೆಯ ಬಗಗೆ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಿ ಕರ್ತವ್ಯ ನಿರ್ವಹಸಲು ತಿಳಿಸಿದ್ದಾರೆ ಎಂದರು.

ಕೋವಿಡ್-19 ಎರಡನೇ ಅಲೆ ತಡೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, 60 ವರ್ಷ ಮೇಲ್ಪಟ್ಟವರು, ಹೊರ ರಾಜ್ಯದಿಂದ ಬರುವವರು ಹಾಗೂ ಕಾರ್ಮಿಕರಿಗೆ ವಿಶೇಷವಾಗಿ ಕರೋನಾ ಪರೀಕ್ಷೆ ನಡೆಸುವಂತೆ ಸೂಚನೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿದಿನ 1200 ಕರೋನಾ ಪರೀಕ್ಷೆಗಳನ್ನ ಮಾಡಲಾಗುತ್ತಿದೆ. ಜೋತೆಗೆ ಕರೋನಾ ಪ್ರಾರಂಭದ ಹಂತದಲ್ಲಿ ಕೈಗೊಂಡಂತಹ ಎಲ್ಲ ಕಾರ್ಯ ಚಟುವಟಿಕೆಗಳನ್ನು ಪುನಃ ಆರಂಭಿಸಿದ್ದು, ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರದೊಂದಿಗೆ ಕಾರವಾರ ಹಾಗೂ ಅಂಕೋಲಾದಲ್ಲಿ ಮಾ. 17ರಿಂದ ಚೆಕ್ ಪೋಸ್ಟ್‍ಗಳನ್ನ ಪ್ರಾರಂಭಿಸಲಾಗಿದೆ. ಕರೋನಾ ಪರೀಕ್ಷೆ, ಹೋಂ ಕ್ವಾರಂಟೇನ್, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ ಕುರಿತು ಎಲ್ಲ ತಹಶಿಲ್ದಾರ್‍ಗಳಿಗೂ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 1 ಲಕ್ಷ 40 ಸಾವಿರ ಜನ 60 ವರ್ಷ ಮೇಲ್ಪಟ್ಟವರಿದ್ದು, ಈ ಪೈಕಿ 15 ಸಾವಿರ ಜನರು ಈಗಾಗಲೆ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನುಳಿದ 1 ಲಕ್ಷ 25 ಸಾವಿರದಷ್ಟು ಜನ ಲಸಿಕೆ ಪಡೆಯಬೇಕಿದೆ. ಹೀಗಾಗಿ ಎಲ್ಲ ಪ್ರಾಥಮಿಕ ಹಾಗೂ ಸಮೂದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರಿಗೆ ಇಂತಿಷ್ಟು ಗುರಿ ನಿಗದಿಪಡಿಸಲಾಗಿದೆ. ಆ ಮೂಲಕ ಆಧಾರ್ ಕಾರ್ಡ್ ಮೂಲಕ 60 ವರ್ಷ ಮೇಲ್ಪಟ್ಟವರ ಮಾಹಿತಿ ಕಲೆ ಹಾಕುತ್ತಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಲಸಿಕೆ ವಿತರಣೆ ಹಾಗೂ ಸರಬರಾಜಿನಲ್ಲಿ ಯಾವುದೇ ತೊಂದರೆಯಿಲ್ಲ. ಜಿಲ್ಲೆಗೆ ಅಗತ್ಯವಿರುವಷ್ಟು ಲಸಿಕೆ ಬಂದಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಸಮೀಪದ ಪ್ರಾಥಮಿಕ ಹಾಗೂ ಸಮೂದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದು. ಕೋವಿಡ್-19 ಪರೀಕ್ಷೆ ಜೊತೆಗೆನೇ ಲಸಿಕೆ ವಿತರಣೆ ಪೂರ್ಣಗೊಳಿಸುವ ಉದ್ದೇದಿಂದ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್‍ನಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಸದಸ್ಯರಿಗೆ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಿ ಕೋವಿಡ್-19 ಎರಡನೇ ಅಲೆ ತಡೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಂತರದಲ್ಲಿ ಸಾರ್ವಜನಿಕರನ್ನು ಮನವೊಲಿಸಿ ಲಸಿಕೆ ಹಾಕಿಸುವಂತೆ ತಿಳಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಸರ್ಕಾರದಿಂದ ಮಂಜೂರಾದ ಮನೆಗಳಿಗೆ ಎರೆಡು ವರ್ಷಗಳಿಂದ ಇನ್ನೂ  ಬಿಲ್ ಆಗಿಲ್ಲ, ಈಗಾಗಲೇ ಕಟ್ಟಡಗಳು ಹಳೆಯದಾಗಿದ್ದು ಜನರು ಸುಸಜ್ಜಿತ ಮನೆಗಳಿಲ್ಲದೆ ಬದುಕುವಂತಾಗಿದೆ ಎಂದು ಸದಸ್ಯರಾದ  ಪುಷ್ಪ ನಾಯ್ಕ್ sಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ ಇ ಒ, ಇದು  ರಾಜ್ಯದ ಸಮಸ್ಸೆಯಾಗಿದ್ದು ಜಿಲ್ಲೆಯ ಮನೆಗಳ ಬಿಲ್ ಗಳಿಗೆ ಸಂಬಂಧಿಸಿದಂತೆ 30 ಕೋಟಿ ಹಣ ಬರುವುದು ಬಾಕಿ ಇದೆ ಸರ್ಕಾರದಿಂದ ಮಂಜೂರಾದ ತಕ್ಷಣ ಬಿಲ್ ಮಾಡಲಾಗುದು ಹಾಗೂ  ಈ  ಕುರಿತಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಮಾಣಿಕಟ್ಟಾದಿಂದ ಕಾಗಾಲ ವರೆಗೆ ವಿಶ್ವ ಬ್ಯಾಂಕ್ ನೆರವಿನಿಂದ ಪ್ರಕೃತಿ ವಿಕೋಪ  ಯೋಜನೆಯಡಿಯಲ್ಲಿ 32 ಕೋಟಿ ವೆಚ್ಚದ ಖಾರಲ್ಯಾಂಡ್ ಮತ್ತು ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ ಹಾಗೂ ಕಾಮಗಾರಿಯಲ್ಲಿ ಇರುವ ಲೋಪದೋಷಗಳ ಕುರಿತ ಮನವಿ ಪತ್ರವನ್ನು ಸದಸ್ಯ ರತ್ನಾಕರ. ಎಮ್. ನಾಯ್ಕ್  ಸಭೆಗೆ ನೀಡಿದರು. ಪತ್ರಕ್ಕೆ ಪ್ರತಿಕ್ರಿಯಿಸಿದ  ಸಂಬಂಧಪಟ್ಟ ಅಧಿಕಾರಿಕಾರಿಗಳು ಮತ್ತು ಅಧ್ಯಕ್ಷರು ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಜಿಲ್ಲೆಯ ದೊಡ್ನಳ್ಳಿ ಭಾಗದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟವಾಗುತ್ತಿರುವುದಲ್ಲದೇ, ಕೃತ್ಯ ಎಸಗಿದವರನ್ನು ಬಂಧಿಸಿದ ಮರುದಿನವೇ ಹೊರಬಂದು, ಮತ್ತೆ ಸಾರಾಯಿ ಮಾರಾಟ ಮಾಡುತ್ತಾರೆ.   ಇದು ಗ್ರಾಮಸ್ಥರು ಮತ್ತು ಮಕ್ಕಳಲ್ಲಿ ಪರಿಣಾಮ ಬೀರುತ್ತಿದೆ, ಶಿರಸಿ ವಿಭಾಗದ ಕಸ ವಿಲೇವಾರಿ ಪ್ರದೇಶದಲ್ಲಿ ಪರವಾನಿಗೆ ಇಲ್ಲದೆ  ಅನಧಿಕೃತವಾಗಿ ನೂರಾರು ಹಂದಿಗಳನ್ನ ರಸ್ತೆಗೆ ಬಿಟ್ಟು ಸಾಕಲಾಗುತ್ತಿದೆ. ಕೊಳಚೆ ಪ್ರದೇಶವಾಗಿರುವುದರಿಂದ ಹಾಗೂ ಅಂಗನವಾಡಿಗಳಿರುವುದರಿಂದ ಮಕ್ಕಳಿಗೆ ರೋಗಗಳು ಬರಬಹುದು  ಎಂದು ಸದಸ್ಯರಾದ ಉμÁ ಹೆಗಡೆ ಹೇಳಿದರು. ಇದಕ್ಕೆ ಸಾಮಾಜಿಕ ನ್ಯಾಯ  ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡಮನಿ ಅವರು ಅಬಕಾರಿ ಇಲಾಖೆಗೆ  ಕ್ರಮ  ಜರುಗಿಸಲು ಸೂಚಿಸಿದರು. ಅಲ್ಲದೇ ಸರ್ಕಾರದಿಂದ ಕುರಿ ಹಾಗೂ ಹಂದಿ ಸಾಕಾಣಿಕೆಗೆ ಪರವಾನಿಗೆ ನೀಡುವಾಗ ಸ್ಥಳವಕಾಶವನ್ನ ಪರಿಶೀಳಿಸಲಾಗುತ್ತದೆ ಆದರೆ ಈ ಪ್ರಕರಣ ಅನಧಿಕೃತವಾಗಿರುವುದರಿಂದ ಪಶು ಇಲಾಖೆ ಹಾಗೂ ಅರೋಗ್ಯ ಇಲಾಖೆಯಿಂದ ಪರಿಶೀಲಿಸಿ ಕ್ರಮದ ಕೈಗೊಳ್ಳಲಾಗುವುದು ಎಂದರು.

ಹಳದಿಪುರ ಜಿಲ್ಲಾಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪಿ. ಡಬ್ಲ್ಯೂ. ಡಿ. ರಸ್ತೆಗಳ ನಿರ್ವಹಣೆ ಕೆಲಸ ನಡೆಯುತ್ತಿಲ್ಲ ಮೇಲ್ನೋಟಕ್ಕ್ಕೆ ಕೆಲಸ ನಡೆದಿದೆ ಹಾಗೂ ರಸ್ತೆಗಳ ಪಕ್ಕದಲ್ಲಿ ಅಂಗಡಿಗಳು ತಲೆ ಎತ್ತಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯರಾದ ಶಿವಾನಂದ ಹೆಗಡೆ ಅವರು ಸಭೆಯಲ್ಲಿ ತಿಳಿಸಿದರು.  ಈ ಕುರಿತು  ಪಿ. ಡಬ್ಲ್ಯೂ. ಡಿ. ಅಧಿಕಾರಿ ಮಾತನಾಡಿ ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು ಜಂಗಲ್ ಕಟಿಂಗ್, ಕಿಲೋಮೀಟರ್ ಕಲ್ಲುಗಳ ಪೇಯಿಂಟಿಂಗ್, ಮತ್ತು ಪ್ಯಾಚ್ ವರ್ಕ್ ಕಾಮಗಾರಿ ಮುಗಿದಿದ್ದು ಸೈಡ್ ಶೋಲ್ಡರ್ ಕೆಲಸ ಮಾತ್ರ ಬಾಕಿ ಇದೆ, ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದರು. ಸಭೆಯ ಪ್ರಾರಂಭದಲ್ಲಿ ಶಿಕ್ಷಣ ಮತ್ತು ಆರೋಗ್ಯ, ಸಾಮಾಜಿಕ ನ್ಯಾಯ, ಕೃಷಿ ಮತ್ತು ಕೈಗಾರಿಕೆ, ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಗಳ ನಡವಳಿಕೆಗಳಿಗೆ ಅನುಮೋದನೆ ನೀಡಲಾಯಿತು. ನಂತರ ಜ. 22ರಂದು ಜರುಗಿದ ಜಿಪಂ ಸಾಮಾನ್ಯ ಸಭೆಯ ನಡವಳಿಗಳ ಮೇಲಿನ ಪಾಲನಾ ವರದಿ ಕುರಿತು ಚರ್ಚಿಸಲಾಯಿತು. ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಚೈತ್ರಾ ಕೊಠಾರಕರ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಉಷಾ ನಾಯ್ಕ್ ಸೇರಿದಂತೆ ಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಓದಿ