ಶಿಗ್ಗಾವ್

ಹಳೆಯ ವಿದ್ಯಾರ್ಥಿಗಳ ಸ್ನೇಹಿತರ ದಿನಾಚರಣೆ

ಹಳೆಯ ವಿದ್ಯಾರ್ಥಿಗಳ ಸ್ನೇಹಿತರ ದಿನಾಚರಣೆ

ಶಿಗ್ಗಾವಿ 02:  ಪಟ್ಟಣದ ಎಸ್‌.ಬಿ.ಬಿ.ಮಾಮ್ಲೇದೇಸಾಯಿ ಪ್ರೌಢಶಾಲೆಯ 1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಸ್ನೇಹಿತರ ದಿನಾಚರಣೆಯನ್ನು ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಮೂಲಕ ತಾಲೂಕಿನ ಬಾಡಗ್ರಾಮದ ಕನಕ ಭವನದಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಿದರು. 

ಬೆಳಿಗ್ಗೆಯಿಂದಲೇ ಕನಕ ಅರಮನೆ ಆವರಣದಲ್ಲಿ ಸೇರಿದ ನೂರಕ್ಕೂಅಧಿಕ ಹಳೆಯ ವಿದ್ಯಾರ್ಥಿಗಳು ಪರಸ್ಪರ ಶುಭಾಶಯ ಕೋರುತ್ತ ಸಂಪೂರ್ಣ ಶಾಲಾ ವಾತಾವರಣವನ್ನು ಸೃಷ್ಠಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆ ನಂತರ ಹಾಜರಿ, ಸರಸ್ವತಿ ಪೂಜೆ ಸೇರಿದಂತೆ ಇನ್ನಿತರ ಮನರಂಜನೆ ಕಾರ್ಯಕ್ರಮ ಆಯೋಜಿಸಿದ್ದರು. ಹಳೆಯ ಗೆಳೆಯರು ಪರಸ್ಪರಕುಶಲೋಪರಿ ವಿಚಾರಿಸುತ್ತ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.  

ಸಿದ್ದು ಹಿರೇಮಠ, ರಮೇಶ ಬಾವಿ, ಪ್ರವೀಣ ಪತ್ತಾರ, ಬಸವರಾಜ ಹರ್ತಿ, ಮಂಜುನಾಥ ಮೊರಬದ, ರಮೇಶ ಹಿರಿಗೆಪ್ಪನವರ, ರಶ್ಮಿ ಖುರ್ಸಾಪುರ, ಡಾ: ಜ್ಯೋತಿ ವಿರಕ್ತಮಠ, ರೇಣುಕಾ ಹಿರೆಗೌಡರ, ಪವಿತ್ರ ಹೊಸಗೌಡ್ರ, ವೀರನಗೌಡ್ರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ