ರೈತರಿಗೆ ಉಚಿತ ಸಸಿ ವಿತರಣೆ
ತಾಳಿಕೋಟೆ: ನೂತನ ತಾಲೂಕು ಹಸೀರೀಕರಣಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಮುಂದಾದ ಶ್ರೀ ಖಾಸ್ಗತೇಶ್ವರ ರೈತ ಉತ್ಪಾದಕರ ಕಂಪನಿ.ಲಿ ವತಿಯಿಂದ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ನಗರದ ವಿಠ್ಠಲ ಮಂದಿರ ಹತ್ತಿರದ ಉಭಾಳೆ ಕಾಂಪ್ಲೆಕ್ಸ್ ಮುಂಬಾಗದಲ್ಲಿ ರೈತರಿಗೆ ಉಚಿತವಾಗಿ 500 ಸಸಿಗಳನ್ನು ವಿತರಣೆ ಮಾಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ ರೈತರಿಗೆ ಸಸಿಗಳನ್ನು ವಿತರಣೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದವರು ಸಾರ್ವಜನಿಕರು ಪರಿಸರ ಬಗ್ಗೆ ಕಾಳಜಿಯನ್ನು ಹೆಚ್ಚಿಸಿ, ಅರಣ್ಯ, ಮರಗಿಡ ಹಾಗೂ ಪಶುಪಕ್ಷಿ ಸಂಕುಲವನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ಕಾರ್ಯಪವೃತ್ತರಾಗಬೇಕು.
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಪುರಸಭೆ ಸದಸ್ಯರಾದ ವಾಸುದೇವ ಹೇಬಸೂರ, ಜೈಯಸಿಂಗ ಮೂಲಿಮನಿ, ರಾಘವೇಂದ್ರ ವಿಜಾಪುರ, ಆನಂದ ಮದರಕಲ, ಶಶಿ ಮೂಕಿಹಾಳ, ರಾಜು ಅಲ್ಲಾಪುರ ಶ್ರೀ ಖಾಸ್ಗತೇಶ್ವರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷರಾದ ಬಸವರಾಜ ಸಜ್ಜನ, ಮುಖ್ಯ ಕಾರ್ಯನಿರ್ವಾಹಕ ಪರ್ವತಯ್ಯ ಹಿರೇಮಠ, ಸದಸ್ಯರುಗಳಾದ ಬಸವರಾಜ ನವಲೆ, ಕಾಂತಪ್ಪ ಗೌಡ ಪಾಟೀಲ, ಶರಣು ಹಡಪದ, ಸದಾನಂದ ಸಜ್ಜನ, ಸಿದ್ದು ಸರೂರ, ನಾಗಪ್ಪ ಸಜ್ಜನ ಹಲವರು ಉಪಸ್ಥಿತರಿದ್ದರು.