ಕಂಪ್ಲಿ

ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಉಚಿತ ನೋಟ್ ಪುಸ್ತಕ ಪೆನ್ನು ವಿತರಣೆ

ವಸತಿ ನಿಲಯ ವಿದ್ಯಾರ್ಥಿನಿಯರಿಗೆ ಉಚಿತ ನೋಟ್ ಪುಸ್ತಕ ಪೆನ್ನು ವಿತರಣೆ

ಲೋಕದರ್ಶನ ವರದಿ

ಕಂಪ್ಲಿ 05:  ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶಾಸಕ ಜೆ.ಎನ್‌.ಗಣೇಶ ಜನ್ಮದಿನದ ಪ್ರಯುಕ್ತ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಮಾಜಿ ಸದಸ್ತ ಸಿ.ಆರ್‌.ಹನುಂತಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಷಣ್ಮುಕಪ್ಪ, ಬಿ.ಸಿದ್ದಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ನು ಶುಕ್ರವಾರ ವಿತರಿಸಲಾಯಿತು. ನಂತರ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಮಾಜಿ ಸದಸ್ತ ಸಿ.ಆರ್‌.ಹನುಂತಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಷಣ್ಮುಕಪ್ಪ, ಬಿ.ಸಿದ್ದಪ್ಪ ಮಾತನಾಡಿ, ಶಾಸಕ ಸ್ಥಾನ ಒಲಿದು ಬಂದಾಗಿನಿಂದಲೂ ಹಗಲು ರಾತ್ರಿ ಎನ್ನದೇ ಕಂಪ್ಲಿ ಕ್ಷೇತ್ರದ ಜನರ ನಾಡಿಮಿಡಿತಕ್ಕೆ ತಕ್ಕಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳೊಂದಿಗೆ ಶಿಸ್ತಿ ಸಿಪಾಯಿಯಾಗಿ ಶಾಸಕ ಜೆ.ಎನ್‌.ಗಣೇಶ ಶ್ರಮಿಸಿದ್ದಾರೆ.

ಇಂತಹ ಶಾಸಕರು ನಮಗೆ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯವಾಗಿದೆ. ಕಾಂಗ್ರೆಸ್‌ನ ನಿಷ್ಠಾವಂತ ಶಾಸಕರಾಗಿ ಜನರ ಅಭಿವೃದ್ಧಿಗಾಗಿ ಸದಾ ಮಿಡಿಯುತ್ತಿರುವ ಶಾಸಕ ಗಣೇಶ್‌ಗೆ ಸಚಿವ ಸ್ಥಾನ ನೀಡಿದರೆ, ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಮಾದರಿಯಾಗಲಿದೆ ಎಂದರು. ಇಲ್ಲಿನ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಸತಿ ನಿಲಯ ಪಾಲಕಿ ಎಂ.ಬಿ.ಶುಭಾ, ಮುಖಂಡರಾದ ಭಟ್ಟ ಪ್ರಸಾದ್, ಕರಿಬಸವನಗೌಡ, ಎಲ್‌.ರಾಮನಾಯ್ಡು, ಕರೇಕಲ್ ಮನೋಹರ, ಕೆ.ಎಸ್‌.ಚಾಂದ್‌ಬಾಷಾ, ಎಚ್‌.ಪಿ.ಶಿಕಾರಿರಾಮು, ಹೋಟಲ್ ಶೇಕ್ಷಾವಲಿ, ಕೆ.ಹೊನ್ನೂರ​‍್ಪ, ಗೋಪಾಲ, ಆರ್‌.ಪಿ.ಶಶಿಕುಮಾರ, ವೆಂಕಟೇಶ, ಸಿ ವಿರುಪಾಕ್ಷಿ ಎಲ್‌.ರಾಜೇಶ, ರಾಮಸಾಗರ ವಿರುಪಣ್ಣ  ಸೇರಿದಂತೆ ಅನೇಕರಿದ್ದರು.   


ಸುದ್ದಿ ಓದಿ