ಜಮಖಂಡಿ

ವಿದ್ಯಾರ್ಥಿಗಳು ಉಚಿತ ಆರೋಗ್ಯ ತಪಾಸಣೆ

ವಿದ್ಯಾರ್ಥಿಗಳು ಉಚಿತ ಆರೋಗ್ಯ ತಪಾಸಣೆ

ಜಮಖಂಡಿ, 20: ನಗರದ ಜೈನ ವೃದ್ಧಾಶ್ರಮದಲ್ಲಿನ ಜನತೆಗೆ ಬಿ,ಎಲ್,ಡಿ,ಇ ಶಿಕ್ಷಣ ಸಂಸ್ಥೆಯ ಬಿಎಸ್‌ಸಿ ನಸಿಂರ್ಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಚಿತ ಆರೋಗ್ಯ ತಪಾಸಣೆ ನಡೆಸಿದರು. 

ಪ್ರಾಂಶುಪಾಲ ಡಾ, ವೀರಭದ್ರ​‍್ಪ ಮೆಂಡಗುದ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಂತರ ವಿದ್ಯಾರ್ಥಿಗಳು ವೃದ್ಧಾಶ್ರಮದ ವೃದ್ಧರಲ್ಲಿನ ಮಾನಸಿಕತೆ ಹಾಗೂ ಆರೋಗ್ಯವನ್ನು ತಪಾಸಣೆ ನಡೆಸಿ, ವಿಟಮಿನ್ಸ್‌, ಕ್ಯಾಲ್ಸಿಯಂ ಮಾತ್ರೆಗಳು ಮತ್ತು  ಕೀಲು ನೋವಿಗೆ ಓಷಧಿಗಳನ್ನು ವಿತರಿಸುವ ಮೂಲಕ ಅಗತ್ಯವಿದ್ದಲ್ಲಿ ಡ್ರೆಸಿಂಗ್ ಮಾಡಿದರು. ಚಂದನಾ ಅಳಗಿ, ವೃದ್ಧಾಶ್ರಮದ ಉದ್ದೇಶಗಳು, ಸಿಬ್ಬಂದಿಯ ಮಾದರಿ ಮತ್ತು  ಪ್ರವೇಶ ನೀತಿಗಳು, ಕಾನೂನು ಬಗ್ಗೆ ಮತ್ತು ಅಲ್ಲಿನ ನಿವಾಸಿಗಳಿಗೆ ಬೇಕಾಗುವ ಸೇವೆಗಳ ಕುರಿತು ಮಾಹಿತಿಯನ್ನು ನೀಡಿದರು. 

ಲಕ್ಷ್ಮೀ ಎನ್, ಚೈತ್ರ ಬಿ, ದಾಣ್ಣಮ್ಮ ಪಿ, ಭಾಗ್ಯಶ್ರೀ ಕೆ, ಅವರು ವೃದ್ಧರಿಗೆ ಆರೋಗ್ಯಕರ ಜೀವನ ಶೈಲಿ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ವ್ಯಾಯಾಮ, ವಿಶ್ರಾಂತಿ, ನಿದ್ರೆಯ ಬಗ್ಗೆ ಮಾಹಿತಿ ತಿಳಿಸಿದರು. ವೃದ್ಧರಿಗಾಗಿ ಮನರಂಜನೆಯನ್ನು ಆಯೋಜಿಸಿ. ಕಾಮಿಡಿ ಸ್ಕಿಟ್, ನೃತ್ಯ ಮತ್ತು ಹಾಡು ಹಾಡುವ ಮೂಲಕ ರಂಜಿಸಿದರು. ಸಿಹಿಯಾದ ಊಟವನ್ನು ಉನ್ನಬಡಿಸಿದರು. ಪ್ರಾಂಶುಪಾಲ ಡಾ, ವೀರಭದ್ರ​‍್ಪ ಮೆಂಡಗುದ್ಲಿ, ಶ್ಶಾಂತಪ್ಪ, ಮಹೇಶ ಸೇರಿದಂತೆ ಹಲವು ವಿದ್ಯಾರ್ಥಿಗಳು ಜೈನ ವೃದ್ಧಾಶ್ರಮಕ್ಕೆ ಹಣದ ಸಹಾಯ ನೀಡಿದರು.ಇದೇ ಸಂದರ್ಭದಲ್ಲಿ ರಾಜೇಶ್ವರಿ ಕಂಬಿ, ಸವಿತಾ ಐನಾಪುರ, ಸೋಮೇಶ ನಿಕ್ಕಮ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ