ತಾಳಿಕೋಟಿ

ಸೆ.24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸೆ.24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ತಾಳಿಕೋಟಿ೨೧: ದೇವಿಕಾ ಸುಬ್ಬರಾವ್ ಫೌಂಡೇಶನ್ ಬೆಂಗಳೂರ(ಮುದ್ದೇಬಿಹಾಳ) ಹಾಗೂ ವೀರಶೈವ ವಿದ್ಯಾವರ್ಧಕ ಸಂಘ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ರೋಗಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.24ರಂದು ನಡೆಯಲಿದೆ.

ಅಂದು ಮುಂಜಾನೆ 10:00 ಘಂಟೆಗೆ ಪಟ್ಟಣದ ಎಸ್. ಕೆ. ಕಾಲೇಜ ಬಾಲಕರ ವಸತಿ ನಿಲಯದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರು ಹೃದಯರೋಗ ಕಾಯಿಲೆ, ನರರೋಗ, ಕ್ಯಾನ್ಸರ, ಮೂತ್ರಪಿಂಡಗಳಲ್ಲಿ ಕಲ್ಲು ಹಾಗೂ ಇನ್ನೀತರ ಕಾಯಿಲೆಗಳಿಗೂ ತಪಾಸಣೆ ನಡೆಸಲಿದ್ದಾರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದಲ್ಲಿ ಸ್ವಃತ ಅವರ ಅಂಬ್ಯುಲೆನ್ಸದಲ್ಲಿಯೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉಚಿತವಾಗಿ ಔಷದೋಪಚಾರವನ್ನು ಮಾಡಿಸಿ ಕಳಿಸಿಕೊಡುತ್ತಾರೆ.

ರೋಗ ತಪಾಸಣೆಗೆ ಆಗಮಿಸುವವರು ಬರುವಾಗ ತಮ್ಮ ಜೊತೆಯಲ್ಲಿ ತಪ್ಪದೆ ತಮ್ಮ ಆಧಾರ ಕಾರ್ಡ ಹಾಗೂ ರೇಶನ್(ಬಿಪಿಎಲ್) ಕಾರ್ಡ ತರಬೇಕು. ತಪಾಸಣೆಗೆ ಬರುವವರಿಗಾಗಿ ಊಟದ ವ್ಯವಸ್ಥೆ ಮಾಡಲಾಗುವುದು, ಈ ಶಿಬಿರದ ನಂತರ ವಿಜಯಪೂರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನ ವಿವಿಧ ಸ್ಥಳಗಳಲ್ಲಿಯೂ ಈ ಶಿಬಿರಗಳನ್ನು ನಡೆಸಲಾಗುವುದು.ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಮಾಜಿ ಸಚಿವ ಸಿ.ಎಸ್.ನಾಡಗೌಡ (ಅಪ್ಪಾಜಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ