ತಾಳಿಕೋಟಿ

ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ತಾಳಿಕೋಟಿ: ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ದೇವಿಕಾ ಸುಬ್ಬರಾವ್ ಫೌಂಡೇಶನ್ ಮುದ್ದೇಬಿಹಾಳ, ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಹಾಗೂ ಸ್ಪಂದನಾ ಆಸ್ಪತ್ರೆ ವಿಜಯಪೂರ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಅ. 4ರಂದು ನಡೆಯಲಿದೆ.

ಅಂದು ಹಂದ್ರಾಳ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 09:00 ರಿಂದ ಮದ್ಯಾಹ್ನ 03:00ರ ವರೆಗೆ ನಡೆಯುವ ಈ ಶಿಬಿರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಭುಗೌಡ ಲಿಂಗದಳ್ಳಿ, ಡಾ. ರೋಹಿಣಿ ಪಾಟೀಲ, ಹಾಗೂ ಸ್ಪಂದನಾ ಆಸ್ಪತ್ರೆಯ ಡಾ. ರಾಮನಗೌಡ ಬಿರಾದಾರ, ಡಾ. ಅನಿತಾ ಬಿರಾದಾರ, ಡಾ. ಸಮೀರ ಕಾಚುರ, ಡಾ. ಬಾಲಪ್ಪಗೌಡ ಪಾಟೀಲ, ಹಾಗೂ ಅನೀಲ ಸಜ್ಜನ ಆಗಮಿಸಿ ಈ ಶಿಬಿರದಲ್ಲಿ ಪ್ರಮುಖವಾಗಿ ಕಣ್ಣಿನ ತಪಾಸಣೆ ಎಲುಬು ಕೀಲು, ಪ್ರಸುತಿ ಮತ್ತು ಸ್ತ್ರೀರೋಗ ಚಿಕ್ಕಮಕ್ಕಳ ಹಾಗೂ ಜನರಲ್ ಮೆಡಿಸನ್ ಮತ್ತು ಜನರಲ್ ಸರ್ಜರಿಗೆ ಸಂಬಂಧಿಸಿದ ತಪಾಸಣೆ ನಡೆಸಲಾಗುವುದು.

ಸಾರ್ವಜನಿಕರು ಈ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಜಿ ಸಚಿವ ಸಿ. ಎಸ್. ನಾಡಗೌಡ(ಅಪ್ಪಾಜಿ) ಹಾಗೂ ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷೆಯಾದ ಶ್ರೀಮತಿ ಪಲ್ಲವಿ ನಾಡಗೌಡ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ