ಶಿಗ್ಗಾವ್

ವಾಹನ ಚಾಲಕರಿಗೆ ಉಚಿತ ಆಹಾರ ವಿತರಣೆ

ವಾಹನ ಚಾಲಕರಿಗೆ ಉಚಿತ ಆಹಾರ ವಿತರಣೆ

ಶಿಗ್ಗಾವಿ 25: ಕೊರೋನಾ ಎರಡನೇಯ ಅಲೆಯ ಭೀಕರತೆ ಹಿನ್ನಲೆಯಲ್ಲಿ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ಘಟಕ ಮತ್ತು ಯುಥ್ ಕಾಂಗ್ರೆಸ್ ಶಿಗ್ಗಾವಿ ಹಾಗೂ ಸವಣೂರ ಇವರ ಸಂಯುಕ್ತಾಶ್ರಯದಲ್ಲಿ ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಊಟದ ವ್ಯವಸ್ಥೆಯಿಲ್ಲದೇ ವಂಚಿತರಾಗಿರುವ ಲಾರಿ, ಟ್ಯಾಕ್ಸಿ, ವಾಹನ ಚಾಲಕರು ಮತ್ತು ಸಹಾಯಕರಿಗೆ ಉಚಿತ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಬಂಕಾಪೂರ ಟೋಲ್ ಬಳಿ ನಿರ್ವಹಿಸಿ ಮಾನವೀಯತೆ ಮೆರೆದ ಕಾರ್ಯಕರ್ತರು. 

ನ್ಯಾಯವಾದಿ ಹನುಮಂತ ಬಂಡಿವಡ್ಡರ, ವಕ್ತಾರ ಮಂಜುನಾಥ ಮಣ್ಣಣ್ಣವರ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಮುಖಂಡ ನೂರಹ್ಮದ ಮಾಳಗಿಮನಿ, ಬಾಬರ ಬಾವಜಿ, ತಹಮೀದ ಖಾಜಿ, ಗ್ರಾ.ಪಂ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಆರ್‌.ಜಿ.ಪಾಟೀಲ, ಸಾಧಿಕ ಮನಿಯಾರ,ನಿಸಾರ ತೊಕಲ್ಲಿ, ಚೆನ್ನುಕುಮಾರ ದೇಸಾಯಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ