ಉಚಿತ ಕಣ್ಣಿನ ಮೋತಿಬಿಂದು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ
ಕಾರವಾರ 19: ರೋಟರಿ ಕ್ಲಬ್ ಆಫ್ ಕಾರವಾರ, ವಿಶ್ವ ಸೇವಾ ಸಮಿತಿಯ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಶ್ರೀ ಮಹಾಲದೇವ ಶ್ರೀ ಮಹಾಸತಿದೇವಿ ದೇವಸ್ಥಾನ ಕಮೀಟಿ ಅರ್ಗಾ, ಇನ್ನರ್ವ್ಹೀಲ್ ಕ್ಲಬ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ದಿನಾಂಕ: 16-03-2021 ರಂದು ರೋಟರಿ ಶತಾಬ್ದಿಭವನ, ಕಾರವಾರದಲ್ಲಿ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಸುಮಾರು 90 ಜನ ಕಣ್ಣಿನ ತೊಂದರೆ ಇರುವವರನ್ನು ತಪಾಶಿಸಲಾಯಿತು. 38 ಜನರಲ್ಲಿ ಮೋತಿಬಿಂದು (ಕಣ್ಣಿನ ಪೊರೆ) ಇರುವುದನ್ನು ದೃಢಪಡಿಸಿ, ಅವರನ್ನು ಶಸ್ತ್ರ ಚಿಕಿತ್ಸೆಗಾಗಿ ಶಿರಸಿ ರೋಟರಿ ಆಸ್ಪತ್ರೆಗೆ ಕಳುಹಿಸಲಾಯಿತು. ದಿನಾಂಕ: 17-03-2021 ರಂದು ಶಿರಸಿ ಆಸ್ಪತ್ರೆಯ ವೈದ್ಯರಾದ ಡಾ. ಎ.ಜಿ.ವಸ್ತ್ರದ್, ಡಾ. ಗಿರೀಶ ಮೇಟಿ, ಡಾ. ಆದಿತ್ಯ ಫಡ್ನಿಸ್ ಹಾಗೂ ಸಿಬ್ಬಂದಿಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರೋಟರಿ ಆಸ್ಪತ್ರೆಯ ಆಡಳಿತಾಧಿಕಾರಿ ಶಿವಕುಮಾರ, ಪಿಆರ್ಓ ಗಿರೀಶ ಧಾರೇಶ್ವರ, ಕಾರವಾರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ. ಸುನೀಲ್ ಸೋನಿ, ಕಾರ್ಯದರ್ಶಿ ರೋ. ಗಣಪತಿ ಬಾಡಕರ, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ರೋ. ಡಾ. ಸಮೀರಕುಮಾರ ನಾಯ್ಕ, ಕ್ಯಾಂಪ್ ಕೋ.ಆರ್ಡಿನೇಟರ್ ರೋ. ಯೊಗೇಶ ಭಂಡಾರಕರ, ರೋ. ಪಾಂಡುರಂಗ ಎಸ್. ನಾಯ್ಕ ಮಹಾಲ್ಗಾರ, ಶ್ರೀ ಮಹಾದೇವ ಶ್ರೀ ಮಹಾಸತಿ ದೇವಸ್ಥಾನ ಕಮೀಟಿ ಅರ್ಗಾ ಇದರ ಪ್ರಧಾನ ಅರ್ಚಕ/ಟ್ರಸ್ಟಿ ಶ್ರೀ ದ್ರುವಾ ಯಶ್ವಂತ ನಾಯ್ಕ ಮಹಾಲ್ಗಾರ ಹಾಗೂ ರೋಟರಿ ಸಂಸ್ಥೆಯ ಸದಸ್ಯರು, ಇನ್ನರ್ವ್ಹೀಲ್ ಸಂಸ್ಥೆಯ ಸದಸ್ಯರು, ರೋಟರ್ಯಾಕ್ಟ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದು ಶಿಬಿರಕ್ಕೆ ಸಹಕರಿಸಿದರು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರನ್ನು ದಿನಾಂಕ: 18-03-2021 ರಂದು ವ್ಯವಸ್ಥಿತವಾಗಿ ಕಾರವಾರಕ್ಕೆ ತಂದು ಮುಟ್ಟಿಸಲಾಯಿತು.