ಹಡಗಲಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿ
ಹೂವಿನಹಡಗಲಿ.ಜೂ.13-ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಇಲ್ಲಿನ ಮಲ್ಲಿಗೆ ಯೋಗ ಚಾರಿಟೆಬಲ್ ಟ್ರಸ್ಟ್,ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ 9ಗಂಟೆಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಜರುಗಿತು. ತಾಲೂಕಿನ ನಾನಾ ಕಡೆಗಳಿಂದ 300ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ನಂತರ ಅವಶ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆ ಗುರುತಿಸಲಾಯಿತು. ಮಲ್ಲಿಗೆ ಯೋಗ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಮಾತನಾಡಿ ಗ್ರಾಮೀಣ ಭಾಗದ ಜನರು ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸೆ ಸದುಪಯೋಗ ಪಡಿಸಿಕೊಳ್ಳಿ ಎಂದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಿವಕುಮಾರ ಮಾತನಾಡಿದರು. ಶಂಕರ ಕಣ್ಣಿನ ಆಸ್ಪತ್ರೆಯ,ಸ್ಥಳೀಯ ವ್ಯೆದ್ಯರು ಕಣ್ಣಿನ ತಪಾಸಣೆ ಮಾಡಿ ಚಿಕಿತ್ಸೆಗೆ ಮಾಹಿತಿ ನೀಡಿದರು. ಯು.ಹಾಲಪ್ಪ ಇದ್ದರು.