ಅಥಣಿ

ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ: ಮಹಾ ಬಸ್ಸುಗಳು ಖಾಲಿ ಖಾಲಿ

ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ: ಮಹಾ ಬಸ್ಸುಗಳು ಖಾಲಿ ಖಾಲಿ

ಲೋಕದರ್ಶನ ವರದಿ

ಸಂಬರಗಿ 14: ಕರ್ನಾಟಕ ರಾಜ್ಯ ಸರ್ಕಾರ ಚುನಾವಣೆಯಲ್ಲಿ ಘೋಷಣೆ ಮಾಡಿರುವ ಆಶ್ವಾಸನೆಗಳ ಪೈಕಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಜಾರಿಗೆ ತಂದು ಎರಡು ದಿನ ಕಳೆಯಿತು. ಗಡಿ ಭಾಗದ ಗ್ರಾಮಗಳಲ್ಲಿ ಕರ್ನಾಟಕ ಬಸ್ಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ ಮಹಾರಾಷ್ಟ್ರದ ಬಸ್ಸಗಳು ಪ್ರಯಾಣಿಕರಿಲ್ಲದೆ ಒಡಾಡುತ್ತಿವೆ.

ಅಥಣಿ ಘಟಕದಿಂದ ಸಾಂಗಲಿ ಮಿರಜಕ್ಕೆ ಬಸ್ಸು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಅದೆ ಪ್ರಕಾರ ಸಾಂಗಲಿ ಮಿರಜ ಜತ್ತ ಕವಟೆ ಮಹಾಂಕಾಳ ಘಟಕದಿಂದ ಈ ಭಾಗಕ್ಕೆ ಮಹಾರಾಷ್ಟ್ರದ ಬಸ್ಸುಗಳ ಸಂಖ್ಯೆ ಹೆಚ್ಚಿದೆ. ಕರ್ನಾಟಕ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಕಾರಣ ಕರ್ನಾಟಕದಲ್ಲಿ ಓಡಾಡುವ ಮಹಾರಾಷ್ಟ್ರದ ಬಸ್ಸುಗಳಿಗೆ ಹಾನಿಯಾಗುತ್ತಿದೆ. ಆ ಕಾರಣ ಮಹಾರಾಷ್ಟ್ರದ ಬಸ್ಸುಗಳು ಕರ್ನಾಟಕದಲ್ಲಿ ಸಂಚಾರ ಸ್ಥಗಿತಗೊಳಿಸುವ ಸಂಭವವಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣ ಅಂತರ ರಾಜ್ಯದ 20 ಕಿ.ಮಿ. ಗಡಿಯೊಳಗೆ ಉಚಿತ ಪ್ರಯಾಣ ನೀಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಹಾನಿ ಆದರೂ ಸಹಿತ ನುಡಿದಂತೆ ನಡೆಯುತ್ತಿದೆ. ಮಹಿಳೆಯರಿಗೆ ಅನುಕೂಲವಾಗಿದೆ.

ಮಹಾರಾಷ್ಟ್ರ ಸಾರಿಗೆ ಇಲಾಖೆ ಮಹಾರಾಷ್ಟ್ರ ರಾಜ್ಯದ ಬಸ್ಸುಗಳಲ್ಲಿ ಯಾವುದೇ ರಾಜ್ಯದ ಮಹಿಳೆ ಸಂಚರಿಸಿದರೂ ಕೂಡಾ ಪ್ರಯಾಣದ ದರ ಅರ್ಧ ನಿಗದಿಪಡಿಸಿದ್ದಾರೆ. ಕರ್ನಾಟಕ ಸಾರಿಗೆ ಇಲಾಖೆ ಕರ್ನಾಟಕದ ಯಾವುದೇ ಗುರುತಿನ ಚೀಟಿ ಇದ್ದರೆ ಮಾತ್ರ ಮಹಿಳೆ ಉಚಿತ ಪ್ರಯಾಣ. ಬೇರೆ ರಾಜ್ಯದ ಮಹಿಳೆಯರು ಕರ್ನಾಟಕದ ಬಸ್ಸುಗಳಲ್ಲಿ ಪ್ರಯಾಣ ಮಾಡಿದರೆ ಉಚಿತ ಇರುವದಿಲ್ಲ. ಆದರೆ ಮಹಾರಾಷ್ಟ್ರ ಸರ್ಕಾರ ತಮ್ಮ ರಾಜ್ಯದಲ್ಲಿ ಯಾವುದೇ ರಾಜ್ಯದ ಮಹಿಳೆಯರು ಸಂಚರಿಸಿದರೂ ಕೂಡಾ ಲಾಭ ಪಡೆಯುತ್ತಿದ್ದಾರೆ. ಆದರೆ ಆ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿ ಇರುವದಿಲ್ಲ. ಅದಕ್ಕೆ ಬೇರೆ ರಾಜ್ಯದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

         ಈ ಕುರಿತು ಸಂಬರಗಿ ಗ್ರಾಮದ 75 ವರ್ಷದ ವೃದ್ಧ ಮಹಿಳೆ ರಾಜಾಬಾಯಿ ವಾಯಫಳೆ    ಇವರರನ್ನು ಸಂಪರ್ಕಿಸಿದಾಗ ಸರಕಾರ ಮಹಿಳೆಯರಿಗೆ ಬಸಗಳ ಬದಲು ಕ್ಲಿನಿಕಗಳನ್ನು ಉಚಿತವಾಗಿ ಮಾಡಿದರೆ ಮುಚ್ಚುಗೆಯಾಗುತ್ತಿತ್ತು. ಇದು ಸರಕಾರಕ್ಕೆ ಹಾನಿ ಇದೆ ಎಂದು ಅಭಿಪ್ರಾಯ ಪಟ್ಟರು.

ಈ ಕುರಿತು ಅಥಣಿ ಸಾರಿಗೆ ಇಲಾಖೆ ಘಟಕದ ವ್ಯವಸ್ಥಾಪಕ ನಿಜಗುಣಿ ಕೆರಿ ಇವರನ್ನು ಸಂಪರ್ಕಿಸಿದಾಗ ಅಥಣಿ ಘಟಕದ ಬಸ್ಸುಗಳಲ್ಲಿ  ಜೂನ 11ರಿಂದ 13 ಜೂನವರೆಗೆ 39406 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅದರ ಮೊತ್ತ 12,62,557/- ಆಗಿರುತ್ತದೆ. ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ 

ಸುದ್ದಿ ಓದಿ