ಉಚಿತ ರಕ್ತದ ಗುಂಪು ಪರೀಕ್ಷಾ ಶಿಬಿರ
ರಾಣಿಬೆನ್ನೂರ 31: ಚೌಡೇಶ್ವರಿ ಜಾತ್ರೋತ್ಸವದಲ್ಲಿ ಸ್ಥಳೀಯ ಬ್ಲಡ್ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಉಚಿತ ರಕ್ತದ ಗುಂಪು ಪರೀಕ್ಷಾ ಶಿಬಿರ ಮತ್ತು ಹಿಮೋಗ್ಲೋಬಿನ್ ಪ್ರಮಾಣ ಪರೀಕ್ಷೆಯಲ್ಲಿ ಒಟ್ಟು 250ಕ್ಕೂ ಅಧಿಕ ಜನರು ಇದರ ಪ್ರಯೋಜನ ಪಡೆದರು. ಇದೇ ಸಂದರ್ಭದಲ್ಲಿ ರಕ್ತದಾನದ ಮಹತ್ವ, ಅರಿವು ಸೇರಿದಂತೆ ಅದರಿಂದಾಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ವ್ಯವಸ್ಥಾಪಕ ಶ್ರೀಧರ, ಜಿ.ಆರ್, ಪ್ರವೀಣ ಶ್ರೀಕಾಂತ ಸಾಗರ, ವಿಶ್ವನಾಥ ಹೆಗ್ಗೇರಿ, ಆಲಿ ಮುಬಶೀರ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಓರ್ವರು ಸ್ವಯಂಪ್ರೇರಿತರಾಗಿ ರಕ್ರದಾನ ಮಾಡಿದ್ದು ವಿಶೇಷವಾಗಿತ್ತು.