ಮಕ್ಕಳ ಕಲಿಕಾ ಚೇತನ ಕಾರ್ಯಕ್ರಮದಲ್ಲಿ ಉಚಿತವಾಗಿ ಬ್ಯಾಗ ವಿತರಣೆ
ಬ್ಯಾಡಗಿ 08: ವಿದ್ಯಾರ್ಥಿ ಜೀವನಲ್ಲಿ ಮಕ್ಕಳು ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರವಂತರಾದರೆ ವಿದ್ಯಾರ್ಥಿ ಜೀವನ ಸುಖಮಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾರುತಿ ತಳವಾರ ಹೇಳಿದರು.
ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಗಂಗಾ ಗ್ರಾಮೀಣ ಹಾಗೂ ನಗರಾಭಿವೃದ್ದಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಚೇತನ ಕಾರ್ಯಕ್ರಮದಲ್ಲಿ ಉಚಿತವಾಗಿ ಬ್ಯಾಗ ವಿತರಿಸಿ ಮಾತನಾಡಿದ ಅವರು, ಮಕ್ಕಳು ದಿನ ನಿತ್ಯ ಹೇಳಿದ ಪಾಠವನ್ನು ಗಮನವಿಟ್ಟು ಕೇಳಿ ಮನದಲ್ಲಿ ಮನನ ಮಾಡಿಕೊಂಡಾಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಉಪನ್ಯಾಸಕ ಪರಮೇಶ ಮುಳಗುಂದ ಮಾತನಾಡಿ, ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಬಡತನ ಶ್ರೀಮಂತದ ತಾರತಮ್ಯವಿದೆ ಅದನ್ನು ಸ್ಪಲ್ಪ ಮಟ್ಟಿಗೆ ಹೋಗಲಾಡಿಸಬೇಕಾದರೆ ಹಣಗಳಿಸಿದವರು ದುಡಿಮೆಯ ಒಂದು ಭಾಗವನ್ನು ಎನ್.ಜಿ.ಓ, ಸಂಘ ಸಂಸ್ಥೆಗಳ ಮೂಲಕ ಸಮಾಜದ ಬಡವರಿಗೆ ವಿದ್ಯಾರ್ಥಿಗಳಿಗೆ ನೀಡಿದರೆ, ಸಮಾಜದಲ್ಲಿ ಉತ್ತಮ ಸಮಾನತೆಯ ಪರಿಸರ ಸೃಷ್ಟಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಗಂಗಾ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬೋವಿ, ಬಸವರಾಜ ಬನ್ನಿಹಟ್ಟಿ, ಉಮೇಶ ಬನ್ನಿಹಟ್ಟಿ, ಚಂದ್ರು ಮುಳಗುಂದ, ಯಲ್ಲಪ್ಪ ಗಡ್ಡದವರ, ಮಂಜುನಾಥ ಹಾದಿಮನಿ, ಮೇಘಾ ಸತ್ಯಮೂತರ್ಿ, ಮಂಜುನಾಥ ಬಿಲ್ಲಣ್ಣನವರ, ಬಸಪ್ಪ ಕೆಪ್ಪಲಿಂಗಣ್ಣನವರ ಸೇರಿದಂತೆ ಇತರರಿದ್ದರು