ರಾಣೆಬೆನ್ನೂರ

ಶಿವಕುಮಾರ್ ಶಿವಾಚಾರ್ಯರ ಶ್ರದ್ಧಾಂಜಲಿ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಿವಕುಮಾರ್ ಶಿವಾಚಾರ್ಯರ ಶ್ರದ್ಧಾಂಜಲಿ: ಉಚಿತ ಆರೋಗ್ಯ ತಪಾಸಣಾ ಶಿಬಿರ

ರಾಣೆಬೆನ್ನೂರು 15:  ತರಳಬಾಳು ಜಗದ್ಗುರು ಬೃಹನ್ ಮಠದ, 20ನೇ ಜಗದ್ಗುರುಗಳಾಗಿದ್ದ  ಲಿಂ, ಶ್ರೀ ಶಿವಕುಮಾರ್ ಶಿವಾಚಾರ್ಯರ ಶ್ರೀಗಳವರ 30ನೇ ಶ್ರದ್ಧಾಂಜಲಿ ಸಮಾರಂಭವು ಸೆಪ್ಟೆಂಬರ್ 17ರಂದು 2022 ರ ಶನಿವಾರ ಮುಂಜಾನೆ 10 ಗಂಟೆಯಿಂದ ಸಂಜೆ 5 ರವರೆಗೆ ರಾಣೆಬೆನ್ನೂರು ತಾಲೂಕಿನ ಭಕ್ತ ಸಮುದಾಯದಿಂದ ಭಕ್ತಿ ಸಮರೆ​‍್ಣ ನಡೆಯಲಿದೆ ಎಂದು ಯುವನಾಯಕ ಮಂಜುನಾಥ ಗೌಡಶಿವಣ್ಣನವರ, ಹೇಳಿದರು.  

ಅವರು ಗುರುವಾರ ಮುಂಜಾನೆ ಶಿವಾ ಹೈಸ್ಕೂಲ್ ಭವನದಲ್ಲಿ ಏರಿ​‍್ಡಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ನಿಮಿತ್ತ ಸಾರ್ವಜನಿಕವಾಗಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು  ಏರಿ​‍್ಡಸಲಾಗಿದೆ. ತಾಲೂಕ ಸಾಧು ವೀರಶೈವ ಸಮಾಜ  ಮತ್ತು ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಸಹ ಯೋಗದಲ್ಲಿ ಅಂದು ಕಾಲೇಜು ಆವರಣದಲ್ಲಿ, ಸಂಪೂರ್ಣ ಉಚಿತವಾಗಿ ಹೃದಯ ರೋಗ, ನರರೋಗ, ಮೂತ್ರಪಿಂಡ ರೋಗ, ಕ್ಯಾನ್ಸರ್  ಮತ್ತು ಸಾಮಾನ್ಯ ರೋಗಗಳ ಕುರಿತು ತಪಾಸಣೆ ನಡೆಯಲಿದೆ. ಆಯ್ಕೆಗೊಂಡ ಎಲ್ಲ ರೋಗಿಗಳನ್ನು ಬೆಂಗಳೂರಲ್ಲಿ ಚಿಕಿತ್ಸೆ ನೀಡಿ, ಪುನಃ ಮರಳಿ ಕರೆತರುವ  ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ ಎಂದರು. ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕ ರಾಜೇಶ್ ಗೌಡ್ರ, ಅವರು  ಸಮಾಜದಲ್ಲಿ ಯಾವುದೇ ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯಬೇಕಾದರೆ, ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಶಿವಾಚಾರ್ಯರ ಸ್ಮರಣೆಯಲ್ಲಿ  ಇಂತಹ ಶಿಬಿರಗಳನ್ನು, ಸ್ಥಳೀಯ ಭಕ್ತರ ಸಹಕಾರದಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ವೆಚ್ಚವಿಲ್ಲದೆ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಮುಂದಾಗಬೇಕು  ಎಂದು ಕೋರಿದರು. ಸಮಾಜದ ತಾಲೂಕ ಅಧ್ಯಕ್ಷ ಶಿವಣ್ಣ ನಂದಿಹಳ್ಳಿ, ಜಿ .ಜಿ. ಹೊಟ್ಟೆಗೌಡ್ರ, ಈರಣ್ಣ ಮಾಕನೂರು, ಕರೆಗೌಡ ಧುಳೆಹೊಳೆ, ಪ್ರವೀಣ ಹೂದಿಗ್ಗೆರಿ,ಭಾರತಿ ಕರ್ಜಗಿ,ಪರಮೇಶಪ್ಪ ಹಾದಿಮನಿ, ಚಂದ್ರ​‍್ಪ ಬುಡಮಣ್ಣನವರ, ಜಿ.ಆರ್‌. ಶ್ರೀಧರ್, ಪ್ರಾಚಾರ್ಯ ಕೆ.ಹಳದಪ್ಪ, ಸೇರಿದಂತೆ ಸಮಾಜದ ಮತ್ತಿತರ ಗಣ್ಯರು, ಕಾರ್ಯಕ್ರಮ ಸಂಘಟಿಕರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ:-9611061234-9448734630-9448223815, ಸಂಪರ್ಕಿಸಬಹುದಾಗಿದೆ. 


ಸುದ್ದಿ ಓದಿ