ಸಂಕೇಶ್ವರ

ದಿ. 14 ರಂದು ವೇದಾ ಕ್ಲಿನಿಕನಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣೆ ಹಾಗೂ ಸಲಹಾ ಶಿಬಿರ

ದಿ. 14 ರಂದು ವೇದಾ ಕ್ಲಿನಿಕನಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ ತಪಾಸಣೆ ಹಾಗೂ ಸಲಹಾ ಶಿಬಿರ

ಸಂಕೇಶ್ವರ: ನ: ಮಧುಮೇಹ ದಿನಾಚರಣೆಯ ಅಂಗವಾಗಿ ಸೋಮವಾರ ದಿ. 14 ರಂದು ಮುಂಜಾನೆ 9.00 ರಿಂದ ಮಧ್ಯಾಹ್ನ 1.00 ರ ವರೆಗೆ ವೇದಾ ಕ್ಲಿನಿಕ್, ಮಾನೆ ಕಾಂಪ್ಲೆಕ್ಸ ಗಾಂಧಿ ಚೌಕ ಸಂಕೇಶ್ವರದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಹಾಗೂ ಸಲಹಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಡಾ: ಚೇತನ ಹೊನವಾಡೆ ಇವರ ತಿಳಿಸಿದರು ಮುಂದೆ ಮಾತನಾಡುತ್ತಾ, ಈ ರೋಗಗಳ ಬಗ್ಗೆ ಜನರು ಜಾಗೃತಗೊಂಡು ಕಾಲ ಕಾಲಕ್ಕೆ ಆರೋಗ್ಯಕರವಾದ ಆಹಾರವನ್ನು ತೆಗೆದುಕೊಳ್ಳಬೇಕು ಹಾಗೂ ದಿನನಿತ್ಯ ಯೋಗ ವ್ಯಾಯಾಮ ಮಾಡುತ್ತಿರಬೇಕು ಎಂದು ಹೇಳಿದರು, ಸದರಿ ಈ ಶಿಬಿರದ ಲಾಭವನ್ನು ನಗರದ ಜನರು ಪಡೆದುಕೊಳ್ಳಬೇಕಾಗಿ ಡಾ: ಅಕ್ಷತಾ ಹೊನವಾಡೆ, ಡಾ ವಿಜಯಾನಂದ ಕಲ್ಲೂರ, ಡಾ ರಚಿತಕಿರಣ ಬಡಿಗೇರ ಇವರೆಲ್ಲ ವೈದ್ಯರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ತಿಳಿಸಿದರು.

 

ಸುದ್ದಿ ಓದಿ