ಶಿಗ್ಗಾವ್

ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆ

ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಣೆ

ಲೋಕದರ್ಶನ ವರದಿ  

ಶಿಗ್ಗಾವಿ 27: ಶಾಲಾ, ಕಾಲೇಜುಗಳ ಶುಲ್ಕವನ್ನು ಕಟ್ಟಲಿಕ್ಕಾದ ಸಂದರ್ಭದಲ್ಲಿ ತಮ್ಮ ಯಲಿಗಾರ ಸೇವಾ ಸಂಸ್ಥೆಯಿಂದ ಮಕ್ಕಳ ಶೈಕ್ಷಣಿಕ ಸ್ಥಿತಿಯನ್ನು ಮನಗಂಡು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದೀರಿ ಎಂದು ವಿದ್ಯಾರ್ಥಿ  ಮುಖಂಡ ಚನ್ನವೀರಯ್ಯ ಬೆಳಗಲಿ ಹೇಳಿದರು. 

ತಾಲೂಕಿನ ಗಂಗೀಬಾವಿಯ ಯಲಿಗಾರ ರೆಸಾರ್ಟನಲ್ಲಿ ಸಿ ಬಿ ಯಲಿಗಾರ ಸೇವಾ ಸಂಸ್ಥೆ ವತಿಯಿಂದ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಿಸಲ್ಪಟ್ಟ ಉಚಿತ ಬಸ್‌ಪಾಸ್ ವಿತರಣಾ ಸರಳ ಕಾರ್ಯಕ್ರಮದಲ್ಲಿ ಬಸ್‌ಪಾಸ್ ಪಡೆದು ಮಾತನಾಡಿದ ಅವರು ಸಾಮಾಜಿಕ ಸೇವೆಯ ಜೊತೆಗೆ ಶೈಕ್ಷಣಿಕ ಸೇವೆಗೆ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದೀರಿ ಜೊತೆಗೆ ಮಕ್ಕಳ ಪಾಲಕರಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ನಿಮ್ಮ ಕಾರ್ಯ ಶ್ಲಾಘನೀಯ ನಿಮ್ಮ ಸಾಮಾಜಿಕ ಕಾರ್ಯಗಳು ಇನ್ನೂ ಹೆಚ್ಚು ಸಾಗಲಿ, ನೀವು ನೀಡುತ್ತಿರುವ ಉಚಿತ ಬಸ್‌ಪಾಸ್ ಸದುಪಯೋಗವಾಗುತ್ತಿದೆ ಎಂದು ವಿದ್ಯಾರ್ಥಿಗಳು ಸನ್ಮಾನಿಸಿ ಆಶಿಸಿದರು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅದ್ಯಕ್ಷ ಶಶಿಧರ ಯಲಿಗಾರ ಅವರನ್ನ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಆಕಾಶ ಯಲಿಗಾರ ಹಾಗೂ ಯಲಿಗಾರ ಸೇವಾ ಸಂಸ್ಥೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ