ಕಾರವಾರದ ಬಡ ರೋಗಿಗಳಿಗೆ ವರದಾನವಾದ ಕಾಂಗ್ರೆಸ್ ಪಕ್ಷದ ಉಚಿತ ಆಂಬುಲೆನ್ಸ್ ಸೇವೆ
ಕಾರವಾರ 04: ಕಾರವಾರ ದಲ್ಲಿ ಕೋರೋಣ ಪೀಡಿತ ರೋಗಿಗಳಿಗೆ ಕಾಂಗ್ರೆಸ್ ಸಹಾಯ ಹಸ್ತದ ಹೆಸರಲ್ಲಿ ಮಾಡಿರುವ ಉಚಿತ ಆಂಬ್ಯುಲೆನ್ಸ್ ಸೇವೆ ಒಂದು ವರದಾನ ವಾಗಿ ಮಾರ್ಪಟ್ಟಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಮಾರು ಒಂದುವರೆ ತಿಂಗಳ ಹಿಂದೆ ಪ್ರಾರಂಭವಾದ ಉಚಿತ ಆಂಬ್ಯುಲೆನ್ಸ್ ಸೇವೆ ಸುಮಾರು ಮೂವತ್ತಕ್ಕೂ ಹೆಚ್ಚು ಕೋರೋಣ ಹಾಗೂ ಇತರ ರೋಗಿಗಳ ಸಾಗಾಟಕ್ಕೆ ನೆರವಾಗಿದೆ. ಅದರಲ್ಲೂ ಕಾರವಾರದಿಂದ ಮಂಗಳೂರಿಗೆ ಹತ್ತಕ್ಕೂ ಹೆಚ್ಚಿನ ಬಡ ರೋಗಿಗಳನ್ನು ಸಾಗಿಸಿ ಜನಪರ ಕೆಲಸ ಮಾಡಿದ ನೆಮ್ಮದಿ ಇದೆ. ಅಂಬುಲೆನ್ಸ ಸೇವೆಯನ್ನು ದೇವದತ್ತ ಕಾಮತ್ ಮತ್ತು ತಾವು ಮಾಡಿರುವುದಾಗಿ ಹೇಳಿದ್ದಾರೆ.
ಕೊರೋನಾ ರೋಗಿಗಳು ಮಾತ್ರ ಅಲ್ಲದೆ ಉಳಿದ ರೋಗಿಗಳನ್ನು ಕೂಡಾ ಜಿಲ್ಲೆಯಾದ್ಯಂತ ಅವರು ಇಚ್ಚೆ ಪಟ್ಟ ಆಸ್ಪತ್ರೆಗಳಿಗೆ ಸಾಗಿಸಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ನಿನ್ನೆಯಷ್ಟೇ ಮಾಜಾಳಿ ಗೊಟ್ನಿ ಬಾಗ್ ನಾಯ್ಕ್ ವಾಡಾ ಇಲ್ಲಿಯ ಸುಶ್ಮಿತಾ ಜೈರಾಮ್ ನಾಯ್ಕ ಎಂಬ ಸಾಮಾನ್ಯ ರೋಗಿಯನ್ನು ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ಉಚಿತವಾಗಿ ಸಾಗಿಸಲಾಗಿದೆ. ಈ ನಮ್ಮ ಆಂಬ್ಯುಲೆನ್ಸ್ ಉಚಿತ ಸೇವೆ ನೆರವು ಬಡವರಿಗೆ ಮುಂದೆಯೂ ಸಿಗಲಿದೆ. ಇದು ಮಾತ್ರವಲ್ಲದೆ ಕಾಂಗ್ರೆಸ್ ಸಹಾಯ ಹಸ್ತ ನೆರವು ಅಡಿಯಲ್ಲಿ ಅವಶ್ಯಕತೆ ಇದ್ದವರಿಗೆ ಆಮ್ಲಜನಕ ಸಿಲಿಂಡರ್ ಪೂರೈಕೆ ನಿರಂತರವಾಗಿ ಮುಂದುವರಿದಿದೆ ಮಾಜಿ ಶಾಸಕರು ತಿಳಿಸಿದ್ದಾರೆ.