ಶಿಗ್ಗಾವ್

ಯುವಕ- ಯುವತಿಯರಿಗೆ ನೌಕರಿ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

ಯುವಕ- ಯುವತಿಯರಿಗೆ ನೌಕರಿ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ


ಲೋಕದರ್ಶನ ವರದಿ 

ಶಿಗ್ಗಾವಿ 01: ನಿರುದ್ಯೋಗಿ ಯುವಕ- ಯುವತಿಯರಿಗೆ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ ಯುವಕನೋರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ರವಿವಾರ ನಡೆದಿದೆ. 

     ನೌಕರಿ ಕೋಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಿಶ್ಯಾಳ ಪಿ.ಬಿ. ಗ್ರಾಮದ ಶರಣಪ್ಪ ಸಿದ್ದಪ್ಪ ಅಳಗುಂಡಗಿ ಎಂದು ತಿಳಿದುಬಂದಿದೆ. ಇತ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಹತ್ತಿರ ಕರ್ನಾಟಕ ಸ್ಟುಡೆಂಟ್ಸ್‌ ಜಾಬ್ ಇನಫಾರ್ಮೇಶನ್ ಸೆಂಟರ್ ಅಂತಾ ಎನ್‌.ಜಿ.ಓ. ಸಂಸ್ಥೆತೆರೆದು, ಸಂಸ್ಥೆಯಲ್ಲಿ ಇಬ್ಬರು ಯುವತಿಯರಿಗೆ ಕೇಲಸ ನೀಡಿ, ಯುವಕ, ಯುವತಿಯರಿಗೆ ಕರ್ನಾಟಕ ವಿಲೇಜ್ ಗಾರ್ಡ ನಾನ್ ಗೌರ್ವಮೆಂಟ್ ಆರಗೇಶನ್ ನಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಪೀರಸಾಬ ಮುನಿರಸಾಬ ಚನ್ನಾಪುರ ಹಾಗು ಆತನ ಸ್ನೇಹಿತ ಯಲ್ಲಪ್ಪ ನಿಂದ 36 ಸಾವಿರ ಹಣ ಪಡೆದು ನೌಕರಿ ಕೊಡಿಸದೇ ಸತಾಯಿಸುತ್ತಿದ್ದ ನಲ್ಲದೇ, ಕಾಟೇನಹಳ್ಳಿ ಗ್ರಾಮದ ಪ್ರಶಾಂತ ಗುಡ್ಡಪ್ಪ ಹೊಳೆಣ್ಣನವರ ಇವರಿಂದ ಬಾಡಿಗೆ ವಾಹನ ಪಡೆದು ಸುಮಾರು 2 ಲಕ್ಷರೂ ಬಾಡಿಗೆ ಹಣ ನೀಡದೇ ಸತಾಯಿಸುತ್ತಿರುವ ಆರೋಪದ ಮೇರೆಗೆ ಆರೋಪಿ ಶರಣಪ್ಪ ಸಿದ್ದಪ್ಪ ಅಳಗುಂಡಗಿ ಯನ್ನು ಬಂದಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ