ನಾಲ್ಕು ಹಲ್ಲಿನ ಹೋರಿ ಎರಡುವರೆ ಲಕ್ಷಕ್ಕೆ ಮಾರಾಟ
ಇಂಡಿ22: ತಾಲೂಕಿನ ಆಳೂರ ಗ್ರಾಮದ ರೈತ ಮಲ್ಲನಗೌಡ ಮಹಾದೇವ ಬಿರಾದಾರ ಇವರ ಹೋರಿಗೆ ಬಹುಬೇಡಿಕೆ ಬಂದಿದ್ದು ಎರಡೂವರೆ ಲಕ್ಷಕ್ಕೆ ಮಾರಾಟ ಮಾಡಲಾಗಿದೆ.
ಈ ಹೋರಿ ನಾಲ್ಕು ಹಲ್ಲಿನ ಹೋರಿ ತುಂಬಾ ವಿಶೇಷತೆಯನ್ನು ಹೊಂದಿದೆ. ಮರಿ ಹೋರಿ ಹುಟ್ಟಿ ನಾಲ್ಕು ಹಲ್ಲು ಬರುವದರೊಳಗೆ ಮಹಾರಾಷ್ಟ್ರದ ರೈತರಿಂದ ಬಹು ಬೇಡಿಕೆ ಬಂದಿತ್ತು. ಇದನ್ನು ಮುಧೋಳ ತಾಲೂಕಿನ ಮಹಾಲಿಂಗಪುರ ಗ್ರಾಮದ ಸುರೇಶ ನಂದಗಾಂವ ಅವರು ಎರಡುವರೆ ಲಕ್ಷಕ್ಕೆ ಈ ಹೋರಿಯನ್ನು ಕೊಂಡೆಯ್ದರು. ಇದರಿಂದ ಗ್ರಾಮದ ಎಲ್ಲ ರೈತರು ಯುವಕರು ಮಲ್ಲನಗೌಡ ಬಿರಾದಾರ ಇವರ ಹೋರಿಯನ್ನು ಮೆರವಣೆಗೆ ಮುಖಾಂತರ ಬಿಳ್ಕೊಟ್ಟರು.
ತಾಲೂಕಿನ ಹೋರಿ ತಳಿಗಳನ್ನು ಕಾಪಾಡಬೇಕು. ತಲೆ ತಲಾಂತರದಿಂದ ಬಂದ ಈ ಶ್ರೇಷ್ಠವಾದ ತಳಿಗಳನ್ನು ರಕ್ಷಣೆ ಮಾಡಬೇಕು ಎಂಬುದು ಇಲ್ಲಿಯ ಅನೇಕ ರೈತರ ಇಚ್ಛೆ. ಈ ಭಾಗದ ತಳಿಗಳು ನಶಿಸಿ ಹೊಗುತ್ತಿರುವ ಮತ್ತು ಕಡಿಮೆ ಪ್ರಮಾಣದಲ್ಲಿ ಆಕಳು ಸೇರಿದಂತೆ ಅನೇಕ ಪ್ರಾಣಿ ಸಂಕುಲನ ಬೆಳೆಸಿ ಆ ತಳಿಗಳನ್ನು ಮುಂದಿನ ಪೀಳಿಗೆಗೆ ತೋರಿಸುವ ಜವಾಬ್ದಾರಿ ಈಗಿನ ರೈತರದ್ದಾಗಿದೆ ಎಂಬ ಉದ್ದೇಶದಿಂದ ಅನೇಕ ರೈತರು ತಾಲೂಕಿನಲ್ಲಿ ಪ್ರಯತ್ನಿಸುತ್ತಿದ್ದಾರೆ.
ಅಂತವರಲ್ಲಿ ಇಂಡಿ ತಾಲೂಕಿನ ಆಳೂರ ಗ್ರಾಮದ ಮಲ್ಲನಗೌಡ ಬಿರಾದಾರ ಅವರು ಸಹ ಒಬ್ಬರು.
ಶ್ವಾನಗಳಲ್ಲಿ ಮುಧೋಳದ ಹೌಂಡ ಜಾತಿಯ ಶ್ವಾನ ಹೇಗೆ ಪ್ರಸಿದ್ದಿಯೋ ಹಾಗೆಯೇ ಈ ಕಿಲಾರಿ ತಳಿಯ ಹೋರಿ ಪ್ರಸಿದ್ಧಿಯಾಗಿದೆ.
ಹಾಲಿಗಾಗಿ ಜವಾರಿ ಆಕಳು ಮತ್ತು ಬೀಜಕ್ಕಾಗಿ ಕಿಲಾರಿ ಹೋರಿ ಉಪಯೋಗಿಸುತ್ತಾರೆ.
ಗ್ರಾಮದಲ್ಲಿ ಡೋಲು ಬ್ಯಾಂಡ್ ಬಾಜಾ ಬಾರಿಸುತ್ತಾ ಮೆರವಣೆಗೆ ಮೂಲಕ ಹೋರಿಗಳ ಪ್ರದರ್ಶನ ಮಾಡಿದರು.
ಶಿವರಾಯಗೌಡ ಬಿರಾದಾರ, ನಾಗೇಶ ಮೇತ್ರಿ, ನೀಲಪ್ಪ ವಾಲಿಕಾರ, ಅಣ್ಣಪ್ಪ ವಾಡಿ, ಶ್ರೀಶೈಲ ನಾಟಿಕಾರ, ಸಲೀಂ ಚಪ್ಪರಬಂದ, ಅಂಬಣ್ಣ ಆಳೂರ, ಮುದಕಪ್ಪ ಕನ್ನೂರ, ಗುರುಗೌಡ ಬಿರಾದಾರ, ದೀಪಕ ಉತ್ತಸ್ಕರ ಸೇರಿದಂತೆ ಗ್ರಾಮದ ಯುವಕರು, ರೈತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.