ಸಿಂಧಗಿ

ಭಾರತೀಯ ಜನತಾ ಪಾರ್ಟಿ ಸಂಸ್ಥಾಪನೆ ದಿನಾಚರಣೆ

ಭಾರತೀಯ ಜನತಾ ಪಾರ್ಟಿ ಸಂಸ್ಥಾಪನೆ ದಿನಾಚರಣೆ

ಸಿಂದಗಿ 06: ಭಾರತೀಯ ಜನತಾ ಪಕ್ಷ ಹುಟ್ಟಿ ಇವತ್ತಿಗೆ ಭರ್ತಿ ನಲವತ್ತೊಂದು ವರ್ಷ. 1980ನೇ ಏ.6ನೇ ತಾರೀಕು ಭಾರತೀಯ ಜನತಾ ಪಕ್ಷ ಸ್ಥಾಪನೆಯಾಯಿತಾದರೂ ಆ ವಿಚಾರಧಾರೆಯ ರಾಜಕೀಯ ಪಕ್ಷವೊಂದು ನಿಜಕ್ಕೂ ಪ್ರಾರಂಭವಾದದ್ದು 1951 ರ ಅ.21 ರಂದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದದೊಂದಿಗೆ ಡಾ.ಶ್ಯಾಮ ಪ್ರಸಾದ ಮುಖರ್ಜಿಯವರು ಸ್ಥಾಪಿಸಿದ ಭಾರತೀಯ ಜನ ಸಂಘ ಹಿಂದೂ ರಾಷ್ಟ್ರವಾದ ದ ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂತು. ಹಾಗಾಗಿಯೇ ನಮ್ಮ ಪಕ್ಷಕ್ಕೆ 41ರ ಹರೆಯವಾದರೂ, ಅದಕ್ಕೆ 69ರ ದುಡಿಮೆಯ ಪ್ರಾಯವಾಗಿದೆ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ಎನ್ ರಾವೂರ ಎಂದರು.

ಪಟ್ಟಣದ  169 ಬೂತ್ ಅಧ್ಯಕ್ಷ ಪ್ರಕಾಶ ಪರಶುರಾಮ ಶೇರಖಾನೆ ಅವರ ಮನೆಯ ಮೇಲೆ ಭಾಜಪ ಧ್ವಜ ಹಾರಿಸುವ ಮೂಲಕ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನ ಆಚರಿಸಿದರು. 

ನಂತರ ಬೂತ್ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷ ಪ್ರಕಾಶ ಪರಶುರಾಮ ಶೇರಖಾನೆ ವಹಿಸಿದ್ದರು 

ಈ  ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಲಿಂಬೆ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಬಿ.ಎಚ್.ಬಿರಾದಾರ, ಶಂಭುಲಿಂಗ ಕಕ್ಕಳಮೇಲಿ, ಸಿ.ಎಸ್.ನಾಗೂರ, ಸಿದ್ದು ಬಿರಾದಾರ, ಮುತ್ತು ಶಾಬಾದಿ , ಗುರು ತಳವಾರ, ಶ್ರೀಶೈಲ ಕಲಬುರ್ಗಿ, ಚಂದ್ರಶೇಖರ ಅಮಲಿಹಾಳ, ಸುಧೀರ್ ಪಟ್ಟಣಶೆಟ್ಟಿ, ಅಶೋಕ ಹಣಮಶೆಟ್ಟಿ, ಹಾಗೂ ಬೂತ್ ಸಮಿತಿ ಸದಸ್ಯರು, ಕಾರ್ಯಕರ್ತರು ಇತರರು ಇದ್ದರು. 


ಸುದ್ದಿ ಓದಿ