ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ಬ್ಯಾಡಗಿ: ಕ್ಷೇತ್ರದ ಸೇವೆಗೆ ಮತ್ತೂಂದು ಬಾರಿ ಜನತೆ ಆಶೀರ್ವಾದಿಸುವಂತೆ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ ಜನತೆಯಲ್ಲಿ ಮನವಿ ಮಾಡಿಕೊಂಡರು. ಸೋಮವಾರ ಅವರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ದಿ.ದೇವರಾಜ ಅರಸು ಸಾರ್ವಜನಿಕ ಸಮುದಾಯ ಭವನ ಕಟ್ಟಡ ಯೋಜನೆಯಡಿ ಮಂಜೂರಾದ 50 ಲಕ್ಷ ರೂ.ಗಳ ವೆಚ್ಚದಲ್ಲಿ ಮರಡಿ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ನಂತರ ಎಲ್ಲಾ ಗ್ರಾಮಗಳ ಬೇಡಿಕೆಗಳನ್ನು ಈಡೇರಿಸುವಂತ ಕಾರ್ಯವನ್ನು ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವ ತೃಪ್ತಿ ನನ್ನದಾಗಿದೆ. ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಬಾಕಿ ಉಳಿದಿವೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಮುಂದಿನ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ನನಗೆ ತಮ್ಮ ಸಹಕಾರ ನೀಡಿ ಆಯ್ಕೆ ಮಾಡುವಂತೆ ಜನರಲ್ಲಿ ಕೋರಿದರು.
ತಾಲೂಕಾ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಮರಿಡೆಪ್ಪ ಹೆಡಿಯಾಲ ಮಾತನಾಡಿ ಈಗಾಗಲೇ ನಮ್ಮ ಗ್ರಾಮದಲ್ಲಿ ಶಾಸಕರು ಹೆಚ್ಚಿನ ಕಾಮಗಾರಿಗಳನ್ನು ಕೈಗೊಂಡು ತಾಲೂಕಿನಲ್ಲಿ ಮಾದರಿ ಗ್ರಾಮವನ್ನಾಗಿಸಿದ್ದು ಹೆಮ್ಮೆಯನ್ನು ತಂದಿದೆ ಎಂದು ಶಾಸಕರನ್ನು ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಗದೀಶ ಕೆರಕರ, ದೇವಸ್ಥಾನ ಕಮಿಟಿ ಅಧ್ಯಕ್ಷ ಚನಬಸಪ್ಪ ಚನ್ನಳ್ಳಿ, ಸುರೇಶಣ್ಣ ಅಸಾದಿ, ಚನಬಸಣ್ಣ ಬೂದಿಹಾಳ, ರುದ್ರಪ್ಪ ಕಮತರ, ಮೂಕಪ್ಪ ಕೋಣನವರ, ಬಸಣ್ಣ ನೆಲೋಗಲ, ಗ್ರಾ. ಪಂ. ಸದಸ್ಯರಾದ ನಾಗಪ್ಪ ಚನ್ನಳ್ಳಿ, ಪ್ರೇಮಕ್ಕ ಪೂಜಾರ, ಗೌರಮ್ಮ ಕೋಣನವರ, ಲಲಿತಮ್ಮ ರಂಗಾರಿ, ಬಸಣ್ಣ ಕರವಜ್ಜನವರ, ಹೇಮಂತ ಸರವಂದ, ಹಿಂದುಳಿದ ವರ್ಗಗಳ ತಾಲೂಕ ವಿಸ್ತರಣಾಧಿಕಾರಿ ಸಿ ಬಿ ಪ್ರಸಾದಿಮಠ, ಪಿಡಿಓ ವಿದ್ಯಾವತಿ ಹಳೇಗೌಡ್ರ ಇದ್ದರು